

ಮೂಡುಬಿದಿರೆ: ಕಡಲಕೆರೆ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಸಂಭ್ರಮದ ಪ್ರಯುಕ್ತ ಭಾನುವಾರ ರಾತ್ರಿ ಭಜನಾ ಪ್ರೇರಣೋತ್ಸವ ಮತ್ತು ಭಜನಾ ಕಮ್ಮಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಜಿಲ್ಲೆಯ 48 ಭಜನಾ ತಂಡಗಳು ಎರಡು ತಾಸುಗಳ ಕಾಲ ನಡೆದ ಭಜನಾ ಕಮ್ಮಟದಲ್ಲಿ ಪಾಲ್ಗೊಂಡವು.
ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನವಿತ್ತರು. ಮಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ.ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿದರು.
ಚೌಟರ ಅರಮನೆಯ ಕುಲದೀಪ ಎಂ., ಸಿಎ ಲೋಕೇಶ್ ಪುತ್ರನ್, ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ಸಿಎ ರಘುಪತಿ ಎಸ್., ಸೇವಾಂಜಲಿ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ರಾಜೇಶ ಬಂಗೇರ, ಎಂಸಿಎಸ್ ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಿಜಾರು ಸುರೇಶ್ ಶೆಟ್ಟಿ, ಉದ್ಯಮಿ ಗಜೇಂದ್ರ ಕುಮಾರ್, ಪ್ರೊ.ಹರಿ ಕಾರಂತ್, ಯೋಗಿತಾ ನವಾನಂದ, ಸ್ವಾತಿ ವಿಶ್ವಜೀತ್ ಧರ್ಮಸ್ಥಳ ಮುಖ್ಯ ಅತಿಥಿಯಾಗಿದ್ದರು. ಶಾಲಾ ಸಂಚಾಲಕ ಶಾಂತಾರಾಮ ಕುಡ್ವ ಹಾಗೂ ಮುಖ್ಯ ಮಾತಾಜಿ ವತ್ಸಲಾ ರಾಜೇಶ್ ಉಪಸ್ಥಿತರಿದ್ದರು.
ಬೆಳುವಾಯಿ ಅಂಬೂರಿ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯ ಅಧ್ಯಕ್ಷ ದಿನಕರ ಕುಲಾಲ್ ಹಾಗೂ ಭಜನಾ ತಂಡದ ಪ್ರಮುಖರನ್ನು ಗೌರವಿಸಲಾಯಿತು. ರಾಮ್ ಕುಮಾರ್ ಮಾರ್ನಾಡ್ ನಿರೂಪಿಸಿದರು. ಶಾಂತಾರಾಮ ಕುಡ್ವ ವಂದಿಸಿದರು. ಕಾರ್ಯಕ್ರಮಕ್ಕೆ ಅಟೋ ರಿಕ್ಷಾ ಚಾಲಕ-ಮಾಲೀಕರ ಸಂಘ, ಪಳಕಳ ಮಿತ್ರ ಮಂಡಳಿ, ನಮೋ ಫ್ರೆಂಡ್ಸ್ ನೆತ್ತೋಡಿ, ಶ್ರೀದೇವಿ ಕ್ರಿಕೆಟರ್ಸ್ ಕೊಡ್ಯಡ್ಕ ಸಹಕರಿಸಿದ್ದರು.