

ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಅವಲೋಕನ ನಡೆಸಬೇಕು. ವಾಲ್ಮೀಕಿ, ಮುಡಾ ಹಗರಣ, ಭ್ರಷ್ಟಚಾರದಲ್ಲಿ ಸರ್ಕಾರ ಮುಳುಗಿ ಹೋಗಿದ್ದು ಇದರಿಂದ ಗ್ರಾಮೀಣ ಭಾಗದ ಜನರು ಬೇಸತ್ತು ಹೋಗಿದ್ದಾರೆ. ವಸತಿ ಯೋಜನೆಗಳನ್ನು ನೀಡದಿರುವ ಸರ್ಕಾರ ಕೋಗಿಲು ಪ್ರಕರಣದಲ್ಲಿ ಹೊರ ರಾಜ್ಯದ ಮಂದಿಗೆ ವಸತಿ ನೀಡುವುದಾಗಿ ಹೇಳಿರುವುದು ಸಮಂಜಸವಲ್ಲ. ಆರಕ್ಷಕ ಠಾಣೆ, ತಾಲೂಕು ಕಚೇರಿ, ಗ್ರಾಮಾಡಳಿತಾಧಿಕಾರಿಗಳ ಕಚೇರಿ ಸಹಿತ ಎಲ್ಲ ವ್ಯವಸ್ಥೆಗಳಲ್ಲಿ ಲಂಚ ತಾಂಡವಾಡುತ್ತಿದೆ.