ಕುಮಾರಧಾರ ಸೇತುವೆಗೆ ತಡೆಬೇಲಿ : ತ್ಯಾಜ್ಯ ಎಸೆಯುವುದು ತಪ್ಪಿಸಲು ಕ್ರಮ

ಕುಮಾರಧಾರ ನದಿ ಸೇತುವೆ ಮೇಲೆ ತಡೆಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿರುವುದು.
ಕುಮಾರಧಾರ ನದಿ ಸೇತುವೆ ಮೇಲೆ ತಡೆಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 9 ಲಕ್ಷ ರೂ. ವೆಚ್ಚದಲ್ಲಿ ಲಯನ್ಸ್‌ನಿಂದ ಕೊಡುಗೆ
  • ನದಿ ಮಲಿನ ತಡೆ ಉದ್ದೇಶದ ಬಹುಕಾಲದ ಬೇಡಿಕೆ ಈಡೇರಿಕೆ

ಹಲವರಿಗೆ ದಂಡ

ದಂಡ ವಿಧಿಸಿದರೂ ಕ್ಯಾರೇ ಇಲ್ಲ

ಪ್ರಾಂತೀಯ ಸಮ್ಮೇಳನದ ನೆನಪು

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಲಯನ್ಸ್ ಪ್ರಾಂತ್ಯ 8ರ ವತಿಯಿಂದ ಮತ್ತು ದಾನಿಗಳ ಸಹಕಾರದಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಎರಡೂ ಬದಿಗೆ ತಡೆಬೇಲಿ ನಿರ್ಮಾಣವಾಗುತ್ತಿದೆ. ಒಂದು ಬದಿಗೆ 465 ಅಡಿ ಉದ್ದ ಹಾಗೂ 8 ಅಡಿ ಎತ್ತರದಂತೆ ಎರಡೂ ಬದಿ ನಿರ್ಮಾಣವಾಗಲಿದೆ. ಲಯನ್ಸ್ ಪ್ರಾಂತೀಯ ಸಮ್ಮೇಳನದ ನೆನಪಿಗಾಗಿ ಪ್ರಾಂತೀಯ ಅಧ್ಯಕ್ಷ ಕೆ.ರಂಗಯ್ಯ ಶೆಟ್ಟಿಗಾರ್ ನೇತೃತ್ವದಲ್ಲಿ ಶಾಶ್ವತ ಯೋಜನೆಯಾಗಿ ತಡೆಬೇಲಿ ನಿರ್ಮಾಣವಾಗುತ್ತಿದೆ. ಲಯನ್ಸ್ ಪ್ರಾಂತ್ಯ 8ರ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ದಾನಿಗಳ ಸಹಕಾರದಲ್ಲಿ ವೆಚ್ಚ ಭರಿಸಲಾಗುತ್ತಿದೆ.

ವಿಜಯವಾಣಿ ವರದಿ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ತ್ಯಾಜ್ಯ ಎಸೆಯುತ್ತಿರುವುದು ಮತ್ತು ಇದರಿಂದ ನದಿ ಮಲಿನ ಆಗುತ್ತಿರುವ ಬಗ್ಗೆ ಹಾಗೂ ಸೇತುವೆಗೆ ತಡೆಬೇಲಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಬಗ್ಗೆ ‘ವಿಜಯವಾಣಿ’ ನಿರಂತರ ವರದಿ ಪ್ರಕಟಿಸಿ ಗಮನ ಸೆಳೆಯುತ್ತಾ ಬಂದಿತ್ತು.

ಕುಮಾರಧಾರ ನದಿಗೆ ಸೇತುವೆಯಿಂದ ತ್ಯಾಜ್ಯ, ಕಸ ಎಸೆಯುವುದನ್ನು ತಡೆಯಲು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ದಾನಿಗಳ ಸಹಕಾರದಲ್ಲಿ ತಡೆಬೇಲಿ ಕಾಮಗಾರಿ ನಡೆಸಲಾಗುತ್ತಿದೆ. ಈ ಮೂಲಕ ನದಿಗೆ ತ್ಯಾಜ್ಯ ಎಸೆಯುವುದಕ್ಕೆ ತಡೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net