ಗುರಿಯೆಡೆಗೆ ಗಮನವಿಟ್ಟರೆ ಉತ್ತಮ ಸಾಧನೆ : ಸುಧೀರ್ ಪೈ

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ 93ನೇ ವರ್ಧಂತ್ಸುತ್ಸವ ನಡೆಯಿತು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ 93ನೇ ವರ್ಧಂತ್ಸುತ್ಸವ ನಡೆಯಿತು.
Published on

ಬಂಟ್ವಾಳ: ಈಗಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಹಲವು ಅವಕಾಶಗಳಿವೆ. ಶಿಸ್ತಿನಿಂದ ಆಸಕ್ತಿಯೊಂದಿಗೆ ಗುರಿಯೆಡೆಗೆ ಗಮನವಿಟ್ಟು, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕಾರ್ಯಪ್ರವೃತ್ತರಾದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಎಂಆರ್‌ಪಿಎಲ್ ಪ್ಲಾನಿಂಗ್ ಮತ್ತು ಕ್ವಾಲಿಟಿಯ ಚೀಫ್ ಜನರಲ್ ಮ್ಯಾನೇಜರ್ ಸುಧೀರ್ ಪೈ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ 93ನೇ ವರ್ಧಂತ್ಸುತ್ಸವ ಉದ್ಘಾಟಿಸಿ ಮಾತನಾಡಿದರು.

ವಿದ್ಯಾ ಸಂಸ್ಥೆ ಸಂಚಾಲಕ ಬಿ.ಸುರೇಶ್ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ, ಕ್ಷೇತ್ರ ಸಂಪನ್ಮೂಲ ಕಚೇರಿ ಬಂಟ್ವಾಳದ ಸಮನ್ವಯ ಅಧಿಕಾರಿ ಸುರೇಖಾ ಯಳವಾರ ಮೊದಲಾದವರಿದ್ದರು. ಸಹ ಶಿಕ್ಷಕ ಪ್ರಶಾಂತ್ ಎನ್. ಸ್ವಾಗತಿಸಿದರು. ಮುಖ್ಯಶಿಕ್ಷಕಿ ಸುರೇಖಾ ಕೆ. ವಾರ್ಷಿಕ ವರದಿ ವಾಚಿಸಿದರು. ಸಹ ಶಿಕ್ಷಕ ದಾಮೋದರ ಪಡಿಯಾರ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net