ಹಿಂದೂಗಳ ಮಧ್ಯೆ ಹೃದಯಗಳ ಬಂಧನ : ಮಾಣಿಲ ಶ್ರೀ

 ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಗೋಪೂಜೆ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಹರೀಶ್ ಪೂಂಜ, ಪದ್ಮನಾಭ ಶಿಲ್ಪಿ, ಕಿರಣ್ ಚಂದ್ರ ಪುಷ್ಪಗಿರಿ, ಸುಮತಿ ಜನಾರ್ದನ ಮತ್ತಿತರರಿದ್ದರು.
ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಗೋಪೂಜೆ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಹರೀಶ್ ಪೂಂಜ, ಪದ್ಮನಾಭ ಶಿಲ್ಪಿ, ಕಿರಣ್ ಚಂದ್ರ ಪುಷ್ಪಗಿರಿ, ಸುಮತಿ ಜನಾರ್ದನ ಮತ್ತಿತರರಿದ್ದರು.
Published on
ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಕುಣಿತ ಭಜನೆ, ಗೊಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮವಿಕಾಸ ಪ್ರಾಂತ ಸಂಯೋಜಕ ಜಗದೀಶ್ ಕಲ್ಲಡ್ಕ ಮಾತನಾಡಿದರು. ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಹರೀಶ್ ಪೂಂಜ, ಪಿಲಿಗೂಡು ಚಾಮುಂಡೇಶ್ವರಿ ಕ್ಷೇತ್ರ ಮೊಕ್ತೇಸರ ಪದ್ಮನಾಭ ಶಿಲ್ಪಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ, ಉರುವಾಲು ಮಾತೃ ಮಂಡಳಿ ಸದಸ್ಯೆ ಸುಮತಿ ಜನಾರ್ದನ, ಕಣಿಯೂರು ಮಹಮ್ಮಾಯಿ ದೇವಸ್ಥಾನ ಅಧ್ಯಕ್ಷ ಬಾಬು ನಾಯ್ಕ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷೆ ಶಾರದಾ ಆರ್.ರೈ, ಧಾರ್ಮಿಕ ಕಾರ್ಯಕರ್ತ ಗಣೇಶ್, ಕುರಾಯ ಶ್ರೀ ಸದಾಶಿವ ದೇವಸ್ಥಾನದ ಮಾಜಿ ಅಧ್ಯಕ್ಷ ಬಾಬು ಗೌಡ, ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಮಡಿವಾಳ, ಪೆರ್ಲ- ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ಸದಾನಂದ, ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು, ಬೆಳ್ತಂಗಡಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಕೊರ್ಯಾರು, ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಮರಕ್ಕಡ, ಬಂದಾರು ಮಂಡಲ ಸಂಯೋಜಕ ಉದಯ್ ಕುಮಾರ್ ಬಿ.ಕೆ., ಆಯೋಜನಾ ಸಮಿತಿ ಉಪಾಧ್ಯಕ್ಷ ರಕ್ಷಿತ್ ಪಣೆಕ್ಕರ, ಜತೆ ಕಾರ್ಯದರ್ಶಿ ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಸಾಧಕರು, ಅಯೋಧ್ಯಾ ಕರಸೇವಕರನ್ನು ಸನ್ಮಾನಿಸಲಾಯಿತು. ಉದಯ್ ಕುಮಾರ್ ಬಿ.ಕೆ. ಸ್ವಾಗತಿಸಿದರು. ಕೆ.ಪಿ.ನವೀನ್ ಕುಮಾರ್ ಜೈನ್ ನಿರೂಪಿಸಿದರು. ವಸಂತ ಮರಕ್ಕಡ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net