ಇಂಗ್ಲೆಂಡ್, ಜರ್ಮನಿ, ನೆದರ್‌ಲ್ಯಾಂಡ್, ಸ್ಲೋವೆನಿಯಾ, ಇಟಲಿ, ಇಸ್ಟೊನಿಯಾ, ಸ್ವೀಡನ್, ಇಂಡೋನೇಷ್ಯಾ, ಪೋರ್ಚುಗಲ್ ಮೊದಲಾದ ವಿದೇಶಿ ಗಾಳಿಪಟ ತಂಡಗಳು ಹಾಗೂ ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾನ, ಕೇರಳ, ಗುಜರಾತ್ ಮೊದಲಾದ ರಾಜ್ಯಗಳಿಂದ ಗಾಳಿಪಟ ತಂಡಗಳು ಭಾಗವಹಿಸಿವೆ. 30 ಅಂತರಾಷ್ಟ್ರೀಯ ಸಹಿತ 60ಕ್ಕೂ ಅಧಿಕ ಮಂದಿ ಗಾಳಿಪಟುಗಳು ಪಾಲ್ಗೊಂಡಿದ್ದಾರೆ.