ಎಸ್.ಕೆ.ಆನಂದ್‌ಗೆ ಬಾಲವನ ರಾಜ್ಯ ಪ್ರಶಸ್ತಿ BALAVANA

balavana prashasti
ಎಸ್.ಕೆ.ಆನಂದ್
Published on: 

ಪುತ್ತೂರು: ಜ್ಞಾನಪೀಠ ಪುರಸ್ಕೃತ ಡಾ.ಶಿವರಾಮ ಕಾರಂತರ ಪುತ್ತೂರಿನ ಬಾಲವನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಡಾ.ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-೨೦೨೬’ಗೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಸಾಧಕ, ‘ಮಾಸ್ಟರ್ ಪ್ಲಾನರಿ’ ಸಂಸ್ಥೆ ಮುಖ್ಯಸ್ಥ ಎಸ್.ಕೆ.ಆನಂದ್ ಆಯ್ಕೆಯಾಗಿದ್ದಾರೆ.

ಎಸ್.ಕೆ.ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ‘ಕಾಂಕೂಡ್’ ಎಂಬ ಪರ್ಯಾಯ ವಸ್ತು ಆವಿಷ್ಕರಿಸಿ, ದೇಶದಲ್ಲೇ ವೃಕ್ಷ ರಕ್ಷಣೆಯ ಬೃಹತ್ ಕ್ರಾಂತಿ ನಡೆಸಿದ ಅಪೂರ್ವ ಕೊಡುಗೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅ.೧೦ರಂದು ಬಾಲವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ, ಬಾಲವನ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಸ್ಟೆಲ್ಲಾ ವರ್ಗೀಸ್, ಸದಸ್ಯರಾದ ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ.ಬಿ.ಅರ್ತಿಕಜೆ ಹಾಗೂ ರೆ.ವಿಜಯ್ ಹಾರ್ವಿನ್ ಅವರನ್ನೊಳಗೊಂಡ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net