

ಪ್ರಮುಖ ಮುಖ್ಯಾಂಶಗಳು
ಇಲ್ಲಿರುವ ರಸ್ತೆ ಸರಿಪಡಿಸಿದರೆ ಅದು ರೈಲ್ವೆ ಇಲಾಖೆಗೂ ಉಪಯೋಗ, ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುವ ಸಂದರ್ಭದಲ್ಲೂ ವಾಹನಗಳು ಹೋಗಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿದೆ.
ಈ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಈ ಭಾಗಕ್ಕೆ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ರೈಲ್ವೆ ಇಲಾಖೆ ಕಬ್ಬಿಣದ ಕಮಾನುಗಳನ್ನು ಅಳವಡಿಸಿದೆ. ಇದರಿಂದಾಗಿ ಮನೆ ಹೊತ್ತಿ ಉರಿಯುತ್ತಿದ್ದಾಗಲೂ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್‌ಗಳು ಬರಲು ಸಾಧ್ಯವಾಗಿಲ್ಲ.