ಅಕ್ರಮ-ಸಕ್ರಮದಲ್ಲಿ ಬಡವರಿಗೆ ದ್ರೋಹ : ಶಾಸಕ ಅಶೋಕ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರದ 17ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಶಾಸಕ ಅಶೋಕ್ ರೈ ಮಾತನಾಡಿದರು. ಪ್ರಮುಖರಾದ ಮಹಮ್ಮದ್ ಬಡಗನ್ನೂರು, ಬಿ.ಎಸ್ ಕೂಡಲಗಿ, ರೂಪರೇಖಾ ಆಳ್ವ ಮೊದಲಾದವರಿದ್ದರು.
ಪುತ್ತೂರು ವಿಧಾನಸಭಾ ಕ್ಷೇತ್ರದ 17ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಶಾಸಕ ಅಶೋಕ್ ರೈ ಮಾತನಾಡಿದರು. ಪ್ರಮುಖರಾದ ಮಹಮ್ಮದ್ ಬಡಗನ್ನೂರು, ಬಿ.ಎಸ್ ಕೂಡಲಗಿ, ರೂಪರೇಖಾ ಆಳ್ವ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುತ್ತೂರು ವಿಧಾನಸಭಾ ಕ್ಷೇತ್ರದ 17ನೇ ಅಕ್ರಮ ಸಕ್ರಮ ಬೈಠಕ್
  • 32 ಸಾವಿರ ಅಕ್ರಮ ಸಕ್ರಮ ಕಡತಗಳು ವಿಲೇವಾರಿ ಬಾಕಿ
  • ಪ್ರತೀ ವಾರ ಶಾಸಕರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಅಕ್ರಮ- ಸಕ್ರಮ ಬೈಠಕ್
ತಹಸೀಲ್ದಾರ್ ಬಿ.ಎಸ್ ಕೂಡಲಗಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಅಕ್ರಮ- ಸಕ್ರಮ ಬೈಠಕ್ ಪ್ರತೀ ವಾರ ನಡೆಯುತ್ತಿದೆ. ನಾವು ಪ್ರತಿ ಗ್ರಾಮಗಳಲ್ಲಿ ಕಡತವನ್ನು ಸಿದ್ಧಪಡಿಸುತ್ತಿದ್ದು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಬಡವರ ಅರ್ಜಿ ತಿರಸ್ಕರಿಸದಂತೆ ರೈ ತಾಕೀತು

ಬಾಕಿ ಇರುವ ಅಕ್ರಮ- ಸಕ್ರಮ ಕಡತಗಳನ್ನು ಒಂದೊಂದಾಗಿ ವಿಲೇವಾರಿ ಮಾಡುತ್ತಿದ್ದು, ಅಕ್ರಮ ಸಕ್ರಮಕ್ಕೆ ಲಂಚ ಕೊಡಬೇಡಿ ಎಂದು ಹೋದೆಡೆಗಳೆಲ್ಲಾ ಹೇಳುತ್ತಿದ್ದೇನೆ. ಆದರೂ ಕದ್ದುಮುಚ್ಚಿ ಕೆಲವರು ಹಣ ನೀಡುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಬಡವರಿಂದ ಹಣ ಪಡೆದವರು ಯಾರೂ ಉದ್ಧಾರವಾಗುವುದಿಲ್ಲ. ಕೆಲವರು ಯಾವುದೆಲ್ಲ ಆಗುವುದಿಲ್ಲ ಎಂದು ಹೇಳಿದ್ದರೋ, ತಮಾಷೆ ಮಾಡಿದ್ದರೋ ಅವರಲ್ಲ ಕೆಲಸಗಳನ್ನು ಮಾಡಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net