ಪುರಾತನ ಬಗ್ಗುಂಡಿ ಕೆರೆಗೂ ಕುಳಾಯಿ ಕೋರ‌್ದಬ್ಬು ದೈವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಆದರೆ ಕೆರೆಗೆ ಚರಂಡಿಯ ಕೊಳಚೆ ಹಾಗೂ ಕೈಗಾರಿಕೆಗಳ ರಾಸಾಯನಿಕ ಭರಿತ ನೀರು ಹರಿದು ಬರುತ್ತಿದೆ. ಕೆಲವರಿಂದ ಒತ್ತುವರಿ ಯತ್ನವೂ ನಡೆಯುತ್ತಿದೆ. ಈ ಬಗ್ಗೆ ಸಮಾನ ಮನಸ್ಕ ನಾಗರಿಕರು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ವಿಜಯವಾಣಿ ಸಹಯೋಗದಲ್ಲಿ ಈ ಹಿಂದೆ ಬಗ್ಗುಂಡಿ ಉಳಿಸಿ ಅಭಿಯಾನ ನಡೆದ್ದರು. ಈ ಕೆರೆಯನ್ನು ಪುನಶ್ಚೇತನಗೊಳಿಸಿದಲ್ಲಿ ನೀರಿನ ಮೂಲ ಶುದ್ಧವಾಗುವ ಜತೆಗೆ ಅಂತರ್ಜಲ ಮಟ್ಟದಲ್ಲಿ ಗಣನೀಯ ಏರಿಕೆಯಾಗಬಹುದು. ಬಗ್ಗುಂಡಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆಯ ಯಶಸ್ವಿಗೆ ಶ್ರಮಿಸುವ ಜತೆಗೆ ಕೆರೆಯ ಪಾವಿತ್ರೃ ಉಳಿಸುವವಂತೆ ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾಯಿ ಹಾಗೂ ಪುರಾತನ ಕೋಟೆದ ಬಬ್ಬು ದೈವಸ್ಥಾನ ಕುಳಾಯಿ ಮನವಿ ಮಾಡಿದೆ.