ಬದಿಯಡ್ಕಕ್ಕೆ ಬೇಕು ಬಸ್ ಟರ್ಮಿನಲ್

ಪ್ರಯಾಣಿಕರಿಗೆ ತೀವ್ರ ತೊಂದರೆ
ಬದಿಯಡ್ಕ ಪೇಟೆಯಲ್ಲಿನ ಬಸ್ ನಿಲ್ದಾಣದ ಕೊರತೆಯಿಂದ ಉಂಟಾಗಿರುವ ಅವ್ಯವಸ್ಥೆ.
ಬದಿಯಡ್ಕ ಪೇಟೆಯಲ್ಲಿನ ಬಸ್ ನಿಲ್ದಾಣದ ಕೊರತೆಯಿಂದ ಉಂಟಾಗಿರುವ ಅವ್ಯವಸ್ಥೆ.
Published on: 

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಬದಿಯಡ್ಕದಲ್ಲಿ ಸುಸಜ್ಜಿತ ಬಸ್ ಟರ್ಮಿನಲ್ ಇಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುವಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತಿದ್ದರೂ, ಬಸ್ ಟರ್ಮಿನಲ್ ನಿರ್ವಾಣದ ವಿಚಾರದಲ್ಲಿ ಪೇಟೆ ಹಿಂದುಳಿದಿದೆ.

ಪ್ರತಿದಿನ ಹಲವಾರು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಬದಿಯಡ್ಕ ಮೂಲಕ ಸಂಚರಿಸುತ್ತವೆ. ಆದರೆ ಈಗಿರುವ ಸಣ್ಣ ಬಸ್ ನಿಲ್ದಾಣದಲ್ಲಿ ಇಷ್ಟೊಂದು ಬಸ್‌ಗಳನ್ನು ಏಕಕಾಲದಲ್ಲಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಸ್ಥಳಾವಕಾಶದ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಕುಂಬಳೆ-ಬದಿಯಡ್ಕ-ಮುಳ್ಳೇರಿಯ(ಸುಳ್ಯ ವಾರ್ಗ) ಹಾಗೂ ಚೆರ್ಕಳ-ಕಲ್ಲಡ್ಕ(ಪುತ್ತೂರು ವಾರ್ಗ) ರಸ್ತೆಗಳು ಬದಿಯಡ್ಕದಲ್ಲಿ ಸೇರುತ್ತವೆ. ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲದೆ, ಕರ್ನಾಟಕದ ಹಲವು ಭಾಗಗಳಿಂದಲೂ ಇಲ್ಲಿಗೆ ತಲುಪಬಹುದು.

ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜಿಗೆ ತೆರಳುವ ರೋಗಿಗಳು ಕೂಡ ಬದಿಯಡ್ಕ ಜಂಕ್ಷನ್ ಅವಲಂಬಿಸಿದ್ದಾರೆ. ಹೀಗಾಗಿ ಪ್ರತಿದಿನ ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶದಲ್ಲಿ ವಿಶಾಲವಾದ ಬಸ್ ಟರ್ಮಿನಲ್ ಇಲ್ಲದಿರುವುದು ಪ್ರಮುಖ ಕೊರತೆಯಾಗಿದೆ.

ಅನುದಾನದ ಕೊರತೆ

ಆಧುನಿಕ ಸೌಲಭ್ಯಗಳಿರುವ ಬಸ್ ಟರ್ಮಿನಲ್ ನಿರ್ಮಿಸುವುದಾಗಿ ಅಧಿಕಾರಿಗಳು ಹೇಳುತ್ತಾ ಸುವಾರು ಎರಡು ದಶಕಗಳು ಕಳೆದಿವೆ. ಆದರೂ ಯೋಜನೆಗೆ ಅನುದಾನ ಮಂಜೂರಾಗಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ. ಬದಿಯಡ್ಕದಂತಹ ಪ್ರಮುಖ ಅಂತರ್‌ರಾಜ್ಯ ಜಂಕ್ಷನ್‌ನಲ್ಲಿ ದೊಡ್ಡ ಬಸ್ ಟರ್ಮಿನಲ್ ನಿರ್ಮಿಸಲು ಗ್ರಾಮ ಪಂಚಾಯಿತಿಯ ಸ್ವಂತ ನಿಧಿ ಸಾಕಾಗುವುದಿಲ್ಲ. ಸಂಸದರು ಮತ್ತು ಶಾಸಕರ ನಿಧಿಯ ನೆರವಿನ ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲೂ ಪ್ರಯತ್ನಗಳು ಅಗತ್ಯವಾಗಿವೆ.

ಖಾಸಗಿ ಸಹಭಾಗಿತ್ವ ಅಥವಾ ಅಭಿವೃದ್ಧಿ ಸಂಸ್ಥೆಗಳ ನೆರವಿನಿಂದ ಬಸ್ ಟರ್ಮಿನಲ್ ನಿರ್ವಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ. ಆದರೆ ಸೂಕ್ತ ಸ್ಥಳ ಗುರುತಿಸುವುದು ಪಂಚಾಯಿತಿಯ ಮುಂದಿರುವ ಸವಾಲಾಗಿದೆ. ಸದ್ಯ ಗ್ರಾಪಂ ಸುವಾರು 15 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ಸಹಿತ ಸಣ್ಣ ಬಸ್ ಕಾಯುವ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಿದೆ. ಆದರೆ ವಿಶಾಲ ಬಸ್ ಟರ್ಮಿನಲ್ ನಿರ್ವಾಣಕ್ಕೆ ಸಂಬಂಧಿಸಿದಂತೆ ಗ್ರಾಪಂ ಬಳಿ ಇನ್ನೂ ಸ್ಪಷ್ಟವಾದ ವಾಸ್ಟರ್ ಪ್ಲಾೃನ್ ಇಲ್ಲ.

ಈ ಕುರಿತು ಯೋಜನೆ ಸಾಕಾರಗೊಳಿಸಲು ಉನ್ನತಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರನ್ನು ನಿರಂತರವಾಗಿ ಸಂಪರ್ಕಿಸಲಾಗುತ್ತಿದೆ ಎಂದು ಪಂಚಾಯಿತಿ ಆಡಳಿತ ಮಂಡಳಿ ತಿಳಿಸಿದೆ.

ಇಲ್ಲ ಶೌಚಗೃಹ ಸೌಲಭ್ಯ

ಬದಿಯಡ್ಕ ಪೇಟೆಯಲ್ಲಿದ್ದ ಸುವಾರು 40 ವರ್ಷಗಳಷ್ಟು ಹಳೆಯ ಬಸ್ ನಿಲ್ದಾಣವನ್ನು ಅಭಿವೃದ್ಧಿ ಕಾಮಗಾರಿಗಳ ನಿರೀಕ್ಷೆಯಲ್ಲಿ ತೆರವುಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಇದ್ದ ಏಕೈಕ ಶೌಚಗೃಹದ ಸೌಲಭ್ಯವೂ ಇಲ್ಲದಂತಾಯಿತು. ಇದರಿಂದಾಗಿ ಗರ್ಭಿಣಿಯರು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಶೌಚಗೃಹ ಸಹಿತ ಬಸ್ ನಿಲ್ದಾಣ ನಿರ್ಮಿಸಲು ಪ್ರಸ್ತುತ ಪಂಚಾಯಿತಿ ಆಡಳಿತ 50 ಲಕ್ಷ ರೂ.ಗಳ ಅಂದಾಜು ವೆಚ್ಚದ ಯೋಜನೆ ರೂಪಿಸಿದೆ. ಶಾಸಕರ ನಿಧಿಯಿಂದಲೂ ಒಂದಷ್ಟು ಮೊತ್ತ ನಿರೀಕ್ಷೆಯಿದ್ದು, ಅದು ಲಭ್ಯವಾದರೆ ಗ್ರಾಪಂಗೆ ಆದಾಯ ಬರುವ ರೀತಿಯಲ್ಲಿ ವ್ಯಾಪಾರ ಸಂಕೀರ್ಣವನ್ನೂ ಒಳಗೊಂಡ ಸುಸಜ್ಜಿತ ನಿಲ್ದಾಣ ನಿರ್ಮಿಸಲಾಗುವುದು.
ಶಂಕರ ಡಿ. ಅಧ್ಯಕ್ಷರು, ಬದಿಯಡ್ಕ ಗ್ರಾಮ ಪಂಚಾಯಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net