ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಆಟೋ ಚಾಲಕ ಬಸವರಾಜ್ ಅವರು ಚಿನ್ನದ ಸರವನ್ನು ಅಪ್ಜಿಲಾ ಅವರಿಗೆ ಮರಳಿಸಿದರು.
ಆಟೋ ಚಾಲಕ ಬಸವರಾಜ್ ಅವರು ಚಿನ್ನದ ಸರವನ್ನು ಅಪ್ಜಿಲಾ ಅವರಿಗೆ ಮರಳಿಸಿದರು.
Published on: 

ಮಂಗಳೂರು: ಆಟೋ ರಿಕ್ಷಾದಲ್ಲಿ ಮರೆತು ಹೋಗಿದ್ದ 48 ಗ್ರಾಂ ಚಿನ್ನಾಭರಣ ಹೊಂದಿದ್ದ ಬ್ಯಾಗನ್ನು ರಿಕ್ಷಾ ಚಾಲಕ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನಗರದ ಮಳಿಗೆಯೊಂದರಿಂದ ಅಪ್ಜಿಲಾ ಎಂಬವರು ಚಿನ್ನದ ನೆಕ್ಲೇಸ್ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸಿ, ಇಳಿಯುವಾಗ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಆತಂಕಗೊಂಡ ಅಪ್ಜಿಲಾ ಚಿನ್ನದ ನೆಕ್ಲೇಸ್‌ಗೆ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಆಟೋ ಚಾಲಕ ಬಸವರಾಜ್ ಅವರಿಗೆ ಬ್ಯಾಗ್ ಸಿಕ್ಕಿದ್ದು, ಅದರಲ್ಲಿದ್ದ ಅಮೂಲ್ಯ ಚಿನ್ನದ ಸರವನ್ನು ಪೊಲೀಸರ ಉಪಸ್ಥಿತಿಯಲ್ಲಿ ಅಪ್ಜಿಲಾ ಅವರಿಗೆ ಮರಳಿಸಿದ್ದಾರೆ. ಬಸವರಾಜ್ ಅವರ ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net