ಮಹಿಳೆಯರ ಸರ ಎಗರಿಸಲು ಯತ್ನ

ಉಪ್ಪಿನಂಗಡಿ ಪೊಲೀಸರಿಗೆ ದೂರು
Gold Chain
crime
Published on: 

ಉಪ್ಪಿನಂಗಡಿ: ರಥಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಕುತ್ತಿಗೆಯಿಂದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಎಗರಿಸಲು ಯತ್ನಿಸಿದ ಘಟನೆ ನ.12ರಂದು ನಡೆದಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಥಬೀದಿಯ ಅಡ್ಡರಸ್ತೆಯ ಬಳಿ ಮಧ್ಯಾಹ್ನ 11.15ಕ್ಕೆ ಆಂಧ್ರಪ್ರದೇಶ ಮೂಲದ ಸ್ವಪ್ನಾ ಎಂಬುವರು ದೇವಾಲಯದಿಂದ ಹಿಂತಿರುಗುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಸವಾರ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲು ಯತ್ನಿಸಿದ್ದು, ಈ ಸಂದರ್ಭ ಅವರು ಬೊಬ್ಬೆ ಹೊಡೆದಾಗ ಸರಗಳ್ಳರು ಪರಾರಿಯಾಗಿದ್ದಾರೆ. ಬಳಿಕ ದೇವಾಲಯದ ಎದುರುಗಡೆ ಉತ್ತರಕ್ರಿಯೆಗೆ ಆಗಮಿಸುತ್ತಿದ್ದ ಮಂಜೇಶ್ವರ ವರ್ಕಾಡಿ ನಿವಾಸಿ ಮಹಿಳೆಯ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದು, ಮಹಿಳೆ ಸರವನ್ನು ಬಲವಾಗಿ ಹಿಡಿದುಕೊಂಡ ಕಾರಣ ಚೈನ್ ತುಂಡರಿಸಲ್ಪಟ್ಟಿತ್ತಾದರೂ ಕಳ್ಳರ ಕೈವಶವಾಗಲಿಲ್ಲ. ಹಾಡಹಗಲೇ ಪೊಲೀಸ್ ಠಾಣೆಯ ಕಣ್ಣಳತೆ ದೂರಲ್ಲಿ ನಡೆದ ಘಟನೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.