ವಿದ್ಯಾರ್ಥಿನಿ ಹಿಂಬಾಲಿಸಿ ಕಿರುಕುಳಕ್ಕೆ ಯತ್ನ : ಯುವಕನನ್ನು ಪೊಲೀಸರಿಗೊಪ್ಪಿಸಿದ ನಾಗರಿಕರು : ಬಾಲಕಿ ರಕ್ಷಣೆಗೆ ಬಂದವರ ಮೇಲೆ ಕೇಸ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕುಂಬಳೆ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂದ್ಯೋಡು ಸನಿಹದ ಮಳ್ಳಂಗೈ ಎಂಬಲ್ಲಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕಿರುಕುಳಕ್ಕೆ ಯತ್ನಿಸಿದ ಯುವಕನನ್ನು ನಾಗರಿಕರು ಸೆರೆಹಿಡಿದು ತಕ್ಕ ಶಾಸ್ತಿ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ.
ಸೋಮವಾರ ಸಂಜೆ ಬಸ್ಸಿಳಿದು ಮನೆ ಕಡೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದ ಕಾರ್ಮಿಕ, ವಡಗರ ನಿವಾಸಿ ಹಿಂಬಾಲಿಸಿ ಹೋಗಿರುವುದಲ್ಲದೆ, ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ವಿದ್ಯಾರ್ಥಿನಿ ಅಥವಾ ಯುವಕನ ಕಡೆಯಿಂದ ದೂರು ಲಭಿಸದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ತೆರಳುತ್ತಿದ್ದ ಆರೋಪಿಗೆ ವಿದ್ಯಾರ್ಥಿನಿ ಸಂಬಂಧಿಕರು ಹಾಗೂ ನಾಗರಿಕರು ಎಚ್ಚರಿಕೆ ನೀಡಿದ್ದರೂ ಆತ ತನ್ನ ಕಿಡಿಗೇಡಿ ಕೃತ್ಯ ಮುಂದುವರಿಸಿದ್ದ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net