ವಾಲ್ಪಾಡಿಯಲ್ಲಿ ಕೋಳಿ ಅಂಕಕ್ಕೆ ದಾಳಿ : 10 ಮಂದಿ ಮೂಡುಬಿದಿರೆ ಪೊಲೀಸರ ವಶಕ್ಕೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬುಧವಾರ ಸಂಜೆ 6.10ಕ್ಕೆ ವಾಲ್ಪಾಡಿ ಗ್ರಾಮದ ಉಡೆಜಾಲು ಎಂಬಲ್ಲಿನ ಮುತ್ತಯ್ಯ ಎಂಬುವವರ ಮನೆಯ ಮುಂಭಾಗದ ಗುಡ್ಡದಲ್ಲಿ ಹಣ ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಜೂಜಾಟಗಾರರು ಪರಾರಿಯಾಗಲು ಯತ್ನಿಸಿದ್ದು, ಅಜಯ್, ಸಂಗಮ್, ಸಂದೇಶ್, ನಿತೇಶ್ ಶೆಟ್ಟಿ, ಅರುಣ್ ಬಿ.ಎಸ್., ಕೃಷ್ಣಪ್ಪ ಪೂಜಾರಿ, ರವಿ ಕುಲಾಲ್, ಯಾದವ್, ದಿನೇಶ್ ಸದಾಶಿವ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳದಿಂದ ತಪ್ಪಿಸಿಕೊಂಡು ಹೋದ ಸಂಪತ್, ಸುನೀಲ್ ಹಾಗೂ ಇತರರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಜೂಜಾಟಕ್ಕೆ ಪಣವಾಗಿ ಬಳಸಲು ಉದ್ದೇಶಿಸಿದ್ದ 6 ಹುಂಜಗಳು ಮತ್ತು 4,500 ರೂ. ನಗದು ಹಣ ಸ್ವಾಧೀನಪಡಿಸಿಕೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net