ವೆಲ್‌ನೆಸ್ ಕ್ಲಿನಿಕ್ ಮಾಲೀಕನ ಬಂಧನ

ಕಾಸರಗೋಡಿನ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ
ಬಂಧನ
ಬಂಧನ
Published on: 

ಕಾಸರಗೋಡು: ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ಆಗಮಿಸಿದ್ದ ಕಾಸರಗೋಡು ನಿವಾಸಿ 34ರ ಹರೆಯದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ವೆಲ್‌ನೆಸ್ ಕ್ಲಿನಿಕ್-ಜಿಮ್ ಮಾಲೀಕನನ್ನು ಪಯ್ಯನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಯ್ಯನ್ನೂರು ಬೈಪಾಸ್ ರಸ್ತೆ ಸಮೀಪದಲ್ಲಿರು ಆರೋಗ್ಯ ವೆಲ್‌ನೆಸ್ ಕ್ಲಿನಿಕ್, ಫಿಟ್ನೆಸ್ ಮತ್ತು ಜಿಮ್ ಮಾಲೀಕ ಶರತ್ ನಂಬ್ಯಾರ್ (44) ಬಂಧಿತ. ಬೆನ್ನು ಹಾಗೂ ಕತ್ತು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ಮಹಿಳೆಯನ್ನು ಬಿಗಿದಪ್ಪಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವುದಾಗಿ ಆರೋಪಿಸಿ ದೂರು ನೀಡಲಾಗಿತ್ತು. 2024 ಜುಲೈ 1ರಂದು ಇದೇ ರೀತಿಯ ಆರೋಪದಡಿ ಬಂಧಿತನಾಗಿದ್ದ ಶರತ್ ನಂಬ್ಯಾರ್ ಜಾಮೀನನಲ್ಲಿ ಬಿಡುಗಡೆಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net