

ಕಾಸರಗೋಡು: ಹನ್ನೊಂದು ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪರಪ್ಪ ನಿವಾಸಿ ಅಬ್ದುಲ್ ರಜಾಕ್(62) ಎಂಬಾತನನ್ನು ಪೋಕ್ಸೊ ಕಾಯ್ದೆಯಡಿ ವಳ್ಳೇರಿಕುಂಡ್ ಸರ್ಕಲ್ ಇನ್‌ಸ್ಪೆಕ್ಟರ್ ನಳಿನಾಕ್ಷ ಬಂಧಿಸಿದ್ದಾರೆ.
ಶಾಲೆಯಿಂದ ವಾಪಸಾಗುತ್ತಿದ್ದ ಬಾಲಕನನ್ನು ಜನವಾಸವಿಲ್ಲದ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನಿಗೆ ಈತ ಹಲವು ಬಾರಿ ಕಿರುಕುಳ ನೀಡಿರುವುದಾಗಿ ವಾಹಿತಿಯಿದೆ. ಬಾಲಕ ಮನೆಯಲಲ್ಲಿ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಪಾಲಕ ಪೊಲೀಸರಿಗೆ ದೂರು ನೀಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವಷರ್ ಇನ್ನೋರ್ವ ಬಾಲಕನಿಗೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿ ಜೈಲುವಾಸ ಅನುಭವಿಸಿದ್ದ.