ಕೋವಿ ಪರವಾನಿಗೆ ನೀಡದಿದ್ದರೆ ರಸ್ತೆ ತಡೆ! ARM LICENCE

ಪುತ್ತೂರಿನಲ್ಲಿ ಆಯೋಜಿಸಲಾದ ದ.ಕ.ಜಿಲ್ಲಾಮಟ್ಟದ ಪ್ರಜಾಸೇವೆ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ದರ್ಶನ್ ಮೊದಲಾದವರು ಇದ್ದರು.
ಪುತ್ತೂರಿನಲ್ಲಿ ಆಯೋಜಿಸಲಾದ ದ.ಕ.ಜಿಲ್ಲಾಮಟ್ಟದ ಪ್ರಜಾಸೇವೆ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ದರ್ಶನ್ ಮೊದಲಾದವರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಜಾಸೇವೆ ಆಂದೋಲನದಲ್ಲಿ ಸಂತ್ರಸ್ತ ರೈತರ ಎಚ್ಚರಿಕೆ
  • ತಿಂಗಳೊಳಗೆ ಕ್ರಮದ ಭರವಸೆ
ಪುತ್ತೂರು: ಕೋವಿ ಪರವಾನಗಿ ನವೀಕರಣ, ವಿತರಣೆಯಲ್ಲಿರುವ ತೊಡಕುಗಳನ್ನು ಶೀಘ್ರ ಬಗೆಹರಿಸಿ, ಇಲ್ಲದಿದ್ದರೆ ನಾವು ೧೦ ಸಾವಿರ ಮಂದಿ ರಸ್ತೆಯಲ್ಲಿ ಕೂರುತ್ತೇವೆ.
- ಇದು ಶನಿವಾರ ಪುತ್ತೂರಿನಲ್ಲಿ ಆಯೋಜಿಸಲಾದ ದ.ಕ.ಜಿಲ್ಲಾಮಟ್ಟದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ರೈತರು ಸಚಿವ ಯು.ಟಿ. ಖಾದರ್ ಅವರ ಮುಂದಿಟ್ಟ ಎಚ್ಚರಿಕೆ.
ಕೋವಿ ಪರವಾನಗಿ ವಿಯದಲ್ಲಿ ಎದುರಾಗುತ್ತಿರುವ ತೊಡಕುಗಳ ಕುರಿತು ೧೦೦ಕ್ಕೂ ಹೆಚ್ಚು ರೈತರನ್ನು ಳಗೊಂಡ ನಿಯೋಗ ಜಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ಸಮಸ್ಯೆಗಳನ್ನು ತೋಡಿಕೊಂಡರು.
ಜಿಲ್ಲೆಯ ಎರಡು ಕಡೆಯಲ್ಲಿ ಕೋವಿಯಿಂದ ಸಮಸ್ಯೆಯಾಗಿದೆ ಎಂಬ ಕಾರಣಕ್ಕೆ ಎಲ್ಲರ ಪರವಾನಗಿ ತಡೆಹಿಡಿಯುವುದು ಸರಿಯಲ್ಲ. ಪೊಲೀಸ್ ಇಲಾಖೆಯ ಸರ್ವೀಸ್ ರಿವಾಲ್ವರ್‌ನಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ನೂರಾರು ವಾಹನ ಅಪಘಾತ ಆಗುತ್ತದೆ. ಹಾಗೆಂದು ಇದನ್ನೆಲ್ಲ ನಿಷೇಧ ಮಾಡಲಾಗುತ್ತದೆಯೇ? ಅಽವೇಶನದಲ್ಲಿ ಒಂದು ರೀತಿಯ ಉತ್ತರ, ಜನಸಾಮಾನ್ಯರಿಗೆ ಇನ್ನೊಂದು ಉತ್ತರ ನೀಡಲಾಗುತ್ತದೆ. ಈಗಿನ ಕಾಲದ ಕೋತಿಗಳು ನಕಲಿ ಬಂದೂಕು ಯಾವುದೆಂದು ತಿಳಿಯುವಷ್ಟು ಶಕ್ತಿ ಹೊಂದಿವೆ. ರೈತರು ಎದುರಿಸುತ್ತಿರುವ ಸಮಸ್ಯೆಗಳು ರೈತರಿಗಷ್ಟೇ ಅರ್ಥವಾಗಲು ಸಾಧ್ಯ. ದಕ್ಷಿಣ ಕನ್ನಡಕ್ಕೆ ಬೇರೆ ಕಾನೂನು ಇದೆಯಾ? ಉಸ್ತುವಾರಿ ಸಚಿವರಾಗಿ ರೈತರಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಕ್ರಮ ಕೈಗೊಳ್ಳದಿದ್ದರೆ ೧೦ ಸಾವಿರ ಮಂದಿ ರಸ್ತೆಯಲ್ಲಿ ಕೂರುತ್ತೇವೆ. ತೋಟದಲ್ಲಿ ನಮಗೆ ಏನೂ ಸಿಗುತ್ತಿಲ್ಲ, ಜೈಲಿಗೆ ಹಾಕಿದರೆ ಊಟವಾದರೂ ಸಿಗುತ್ತದೆ ಎಂದು ಕೋವಿ ಪರವಾನಗೆದಾರರ ಪರವಾಗಿ ಜಯಪ್ರಸಾದ್ ಜೋಶಿ ಬೆಳ್ಳಾರೆ ಆಕ್ರೋಶ ವ್ಯಕ್ತಪಡಿಸಿದರು.
ಕೋವಿ ಪರವಾನಗಿ ನವೀಕರಣ ಅರ್ಜಿ ಒಮ್ಮೆ ತಿರಸ್ಕೃತವಾದರೆ ಮತ್ತೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಅವಕಾಶವಿಲ್ಲ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಪರವಾನಗಿದಾರರು ಪಟ್ಟುಹಿಡಿದರು. ಉತ್ತರಿಸಿದ ಸಚಿವ ಖಾದರ್, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ತಿರಸ್ಕೃತಗೊಂಡವರು ಕೈಬರಹದಲ್ಲಿ ಸಲ್ಲಿಸಬೇಕು. ಈ ಕುರಿತು ಪ್ರಜಾಸೇವೆಯಲ್ಲೇ ಅರ್ಜಿಗಳನ್ನು ಸಲ್ಲಿಸಿದರೆ ಪರಿಹಾರ ನೀಡಲಾಗುವುದು ಎಂದರು.
"

ಜಿಲ್ಲೆಯಲ್ಲಿ ೮ ಸಾವಿರಕ್ಕೂ ಕೋವಿ ಪರವಾನಗಿ ಇದ್ದು, ಈ ಪೈಕಿ ಜಿಲ್ಲೆಯ ಪುತ್ತೂರು, ಬೆಳ್ಳಾರೆ, ಸುಳ್ಯ ಭಾಗದಲ್ಲಿನ ಠೇವಣಿ ಕೇಂದ್ರಗಳಲ್ಲಿ ೨ ಸಾವಿರ ಕೋವಿಗಳನ್ನು ಇಡಲಾಗಿದೆ. ಇವುಗಳನ್ನು ಪರಿಶೀಲಿಸಲಾಗುತ್ತಿದೆ. ಕೋವಿಯಿಂದ ಅಹಿತಕರ ಘಟನೆಗಳು ನಡೆದಿವೆ. ಕೆಲವು ಘಟನೆಯಲ್ಲಿ ಮೃತಪಟ್ಟ ಬಳಿಕ ಬಂದೂಕು ನಾಪತ್ತೆಯಾಗಿದೆ. ಈ ಎಲ್ಲ ಕಾರಣಗಳಿಂದ ಸೂಕ್ತ ಪರಿಶೀಲನೆ ನಡೆಸಲಾಗುತ್ತಿದೆ.

"

ಕೋವಿ ಪರವಾನಗಿ ನವೀಕರಣಕ್ಕೆ ಅಽಕಾರಿಗಳು ಸ್ಪಂದಿಸಬೇಕು. ಪರವಾನಗಿ ನೀಡದಿದ್ದರೆ, ಕೋವಿಯ ಹಣವನ್ನಾದರೂ ಇಲಾಖೆ ನೀಡಬೇಕು. ಹೊಸ ಪರವಾನಗಿ ನೀಡುವಾಗ ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು ನವೀಕರಣದ ಸಮಯದಲ್ಲಿ ಸರಿಯಲ್ಲ. ಮರು ಪರಿಶೀಲಿಸುವ ನಿಟ್ಟಿನಲ್ಲಿ ಅರ್ಜಿಯನ್ನು ನೀಡಿ, ಒಂದು ತಿಂಗಳ ಸಮಯಾವಕಾಶ ಕೊಟ್ಟರೆ ನ್ಯಾಯ ಒದಗಿಸಲಾಗುವುದು.

"

ಕೋವಿ ಪರವಾನಗಿಗೆ ಕೈಬರಹದ ಅರ್ಜಿಯನ್ನು ನೀಡಿ ಇಲಾಖೆಯಿಂದ ಮರು ಪರಿಶೀಲನೆ ಕಾರ್ಯ ನಡೆದಿದೆ. ಆದರೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ನಾನು ಮತ್ತು ಉಸ್ತುವಾರಿ ಸಚಿವರು ಸರ್ಕಾರದ ಮಟ್ಟದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇವೆ.

ಕೆಲ ಕಾಲ ಗೊಂದಲ ಸೃಷ್ಟಿ

ಶಾಸಕರು ಮಾತನಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಪುರಭವನದ ಒಳಗೆ ಬಿದ್ದು ಕೆಲವು ಹೊತ್ತು ಗೊಂದಲ ಸೃಷ್ಟಿಯಾಯಿತು. ಉಸ್ತುವಾರಿ ಸಚಿವ ಯು.ಟಿ.ಖಾದರ್ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿ, ಉಳಿದವರೆಲ್ಲರೂ ತಮ್ಮ ಸ್ಥಳದಲ್ಲೇ ಕುಳಿತುಕೊಳ್ಳುವಂತೆ ತಿಳಿಸಿದರು. ಆರೋಗ್ಯಾಧಿಕಾರಿ ಪರಿಶೀಲನೆ ನಡೆಸಿ, ತಾಲೂಕು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ವ್ಯಕ್ತಿ ಮದ್ಯಪಾನ ಮಾಡಿ ಬಂದಿದ್ದು ಆಯ ತಪ್ಪಿ ಬಿದ್ದಿದ್ದಾನೆಂದು ತಿಳಿದುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net