ನಿವೃತ್ತರು ಕ್ರಿಯಾಶೀಲರಾಗಲು ಸಹಕಾರಿ : ಬಿ.ಎಂ.ರಾಜಗೋಪಾಲ

ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸೇವಾ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಸಭೆಯಲ್ಲಿ ಅನಂತಪದ್ಮನಾಭ ರಾವ್ ಮಾತನಾಡಿದರು. ಪಿಂಚಣಿದಾರರ ಸಂಘ ಅಧ್ಯಕ್ಷ ಪಿ.ಲೋಕನಾಥ ಶೆಟ್ಟಿ, ಪ್ರೊ.ರಾಜಮಣಿ ರಾಮಕುಂಜ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.
ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸೇವಾ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಸಭೆಯಲ್ಲಿ ಅನಂತಪದ್ಮನಾಭ ರಾವ್ ಮಾತನಾಡಿದರು. ಪಿಂಚಣಿದಾರರ ಸಂಘ ಅಧ್ಯಕ್ಷ ಪಿ.ಲೋಕನಾಥ ಶೆಟ್ಟಿ, ಪ್ರೊ.ರಾಜಮಣಿ ರಾಮಕುಂಜ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ


ಪಿಂಚಣಿದಾರರ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರೆ ನಿವೃತ್ತರು ಕ್ರಿಯಾಶೀಲರಾಗಿರಬಹುದು. ನಿವೃತ್ತರು ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಕ್ರಿಯವಾಗಿದ್ದರೆ ಆರೋಗ್ಯವಾಗಿರಬಹುದು ಎಂದು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಬಿ.ಎಂ.ರಾಜಗೋಪಾಲ ಹೇಳಿದರು.


ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸೇವಾ ಸಭಾಂಗಣದಲ್ಲಿ ಬುಧವಾರ ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಪಿಂಚಣಿದಾರರ ಸಂಘ ಅಧ್ಯಕ್ಷ ಪಿ.ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಪ್ರೊ.ರಾಜಮಣಿ ರಾಮಕುಂಜ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿದರು.


ಸಂಘ ಉಪಾಧ್ಯಕ್ಷ ಸಂಕಪ್ಪ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ನೀಲೋಜಿ ರಾವ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಜಯರಾಮ ಪೂಜಾರಿ ವಂದಿಸಿದರು. 75 ವರ್ಷ ತುಂಬಿದ ಪಿ.ಲೋಕನಾಥ ಶೆಟ್ಟಿ, ಅನಂತ ಪದ್ಮನಾಭರಾವ್ ಕೈಕುಂಜೆ, ವಾರಿಜ ಮೊಡಂಕಾಪು, ಶಂಕರನಾರಾಯಣ ಭಟ್ ಮೊಡಂಕಾಪು, ಗಿರಿಜಾ ಬಾಯಿ ಬಿ.ಸಿ.ರೋಡು, ಶಾಂಭವಿ ಕಂದೂರು, ಫೆಲಿಕ್ಸ್ ಹೆರಾಲ್ಡ್ ಮೊಡಂಕಾಪು, ಸುಬ್ರಾಯ ರಾಮ ಮಡಿವಾಳ, ನೋಣಯ್ಯ ಶೆಟ್ಟಿ ತುಂಬೆ, ಕೃಷ್ಣ ನಾಯ್ಕ ಅಗ್ರಹಾರ, ಪಿ.ಶ್ರೀಧರ ಕೈಕಂಬ, ಜಯಂತಿ ಬೈಪಾಸ್ ರಸ್ತೆ, ಸುಂದರ ಮೂಲ್ಯ ಮಣಿಹಳ್ಳ ಮೊದಲಾದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net