ಪರಂಪರೆ ಉಳಿಸಿಕೊಂಡು ಬಂದ ಸಂಸ್ಥೆ

ಸಾಧಕರಿಗೆ ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಮಂಜುನಾಥ ಪೂಜಾರಿ, ಚೈತನ್ಯ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆನುವಂಶೀಯ ಮೊಕ್ತೇಸರ ಎಚ್.ತಾರಾನಾಥ್ ಬಲ್ಲಾಳ್,  ಅಮೃತ ಭಾರತಿ ಟ್ರಸ್ಟಿ ಗುರುದಾಸ್ ಶೆಣೈ ಇದ್ದರು.
ಸಾಧಕರಿಗೆ ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಮಂಜುನಾಥ ಪೂಜಾರಿ, ಚೈತನ್ಯ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆನುವಂಶೀಯ ಮೊಕ್ತೇಸರ ಎಚ್.ತಾರಾನಾಥ್ ಬಲ್ಲಾಳ್, ಅಮೃತ ಭಾರತಿ ಟ್ರಸ್ಟಿ ಗುರುದಾಸ್ ಶೆಣೈ ಇದ್ದರು.
Published on
ಹೆಬ್ರಿ: ಚೈತನ್ಯ ಯುವ ವೃಂದ 40 ವರ್ಷಗಳಿಂದ ಹೆಬ್ರಿಯ ಹೆಮ್ಮೆಯ ಸಂಸ್ಥೆಯಾಗಿ ಪರಂಪರೆ ಉಳಿಸಿಕೊಂಡು ಬಂದು ಇಲ್ಲಿಯ ಪದಾಧಿಕಾರಿಗಳು ಸಮಾಜದ ವಿವಿಧ ಕ್ಷೇತ್ರದಲ್ಲಿ ನಾಯಕರಾಗಿ ಬಂದಿದ್ದಾರೆ. ಅವರಿಂದ ಇನ್ನಷ್ಟು ಉತ್ತಮ ಕೆಲಸಗಳು ನಡೆಯಲಿ ಎಂದು ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಮಂಜುನಾಥ ಪೂಜಾರಿ ಹೇಳಿದರು.
ಹೆಬ್ರಿ ತಾಣ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಅಂಗವಾಗಿ ಚೈತನ್ಯ ಯುವ ವೃಂದ ಹೆಬ್ರಿ ಆಶ್ರಯದಲ್ಲಿ ಸಾಧಕರಿಗೆ ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾರಾಯಣ ಗುರು ಅಭಿವೃದ್ಧಿ ನಿಗಮದ ಪ್ರಥಮ ಅಧ್ಯಕ್ಷ ಮಂಜುನಾಥ ಪೂಜಾರಿ ಅವರನ್ನು ಗೌರವಿಸಲಾಯಿತು. ಧಾರ್ಮಿಕ, ಕೃಷಿ ಕ್ಷೇತ್ರದ ಹಿರಿಯಣ್ಣ ನಾಯ್ಕ ಬಚ್ಚಪ್ಪು, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಮೆಸ್ಕಾಂ ನಿವೃತ್ತ ಲೈನ್‌ಮನ್ ಸುಂದರ್ ಪೂಜಾರಿ, ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಪುತ್ತಿಗೆ ಶ್ರೀಗಳ ಕೋಟಿ ಲೇಖನ ಯಜ್ಞ ವಿಶೇಷ ಪ್ರತಿಭೆ ಅಧ್ವೇತ್ ಚಾರು, ಗಣರಾಜ್ಯೋತ್ಸವ ಪೆರೆಡಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್ ವೈಷ್ಣವಿ ವಿ.ಪ್ರಭು, ಪ್ರತಿಭಾ ಕಾರಂಜಿ ರಾಜ್ಯಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿನಿ ವರ್ಷಿಣಿ ಕುಲಾಲ್ ಮುಳ್ಳುಗುಡ್ಡೆ ಅವರನ್ನು ಚೈತನ್ಯ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಚೈತನ್ಯ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆನುವಂಶೀಯ ಮೊಕ್ತೇಸರ ಎಚ್.ತಾರಾನಾಥ್ ಬಲ್ಲಾಳ್, ಅಮೃತ ಭಾರತಿ ಟ್ರಸ್ಟಿ ಗುರುದಾಸ್ ಶೆಣೈ, ಹೆಬ್ರಿ ಪಿಡಿಒ ಸದಾಶಿವ ಸೇರ್ವೆಗಾರ್, ಸ್ಥಾಪಕ ಅಧ್ಯಕ್ಷ ಎಚ್.ಪ್ರಕಾಶ್ ಮಲ್ಯ, ಗೌರವಾಧ್ಯಕ್ಷ ಜನಾರ್ದನ್ ಎಚ್., ಕಾರ್ಯದರ್ಶಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಆಚಾರ್ಯ ವರದಿ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ನಿತೀಶ್ ಎಸ್.ಪಿ. ಸಾಧಕರನ್ನು ಪರಿಚಯಿಸಿದರು. ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net