

ಕಾಸರಗೋಡು: ಮುಳಿಯಾರು ಪಂಚಾಯಿತಿ ವ್ಯಾಪ್ತಿಯ ಜನರಲ್ಲಿ ಭೀತಿ ಹುಟ್ಟಿಸಿದ್ದ ಆಕ್ರಮಣಕಾರಿ ಕಾಡುಹಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮುಳಿಯಾರು ಪನ್ನಡ್ಕ ನೀರಳತ್ತಿಂಡಿಯಲ್ಲಿ ಶೂಟರ್ ಬಿ.ಅಬ್ದುಲ್ ಗಫೂರ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ಈ ಪ್ರದೇಶದಲ್ಲಿ ಕಾಡುಹಂದಿಗಳ ಉಪಟಳ ತೀವ್ರವಾಗಿದ್ದು, ಈ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷ ಕೆ.ಬಿ.ಮೊಹಮ್ಮದ್ ಕುಂಞಿ ನಿರ್ದೇಶನದಂತೆ ‘ಮಿಷನ್ ವೈಲ್ಡ್ ಪಿಗ್’ ಕಾರ್ಯಾಚರಣೆ ನಡೆಸಲಾಯಿತು.
ಶುಕ್ರವಾರ ಮುಂಜಾನೆ ವೇಳೆ ಹಂದಿಯನ್ನು ಪತ್ತೆ ಹಚ್ಚಿದ ಶೂಟರ್ ಬಿ.ಅಬ್ದುಲ್ ಗಫೂರ್ ನೇತೃತ್ವದ ತಂಡದ ಸದಸ್ಯರು ಆಕ್ರಮಣಕಾರಿ ಹಂದಿಯನ್ನು ಗುಂಡಿಟ್ಟು ಸಾಯಿಸಿದ್ದಾರೆ. ಹತ್ಯೆಗೈಯಲಾದ ಹಂದಿಯ ಕಳೇಬರವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಯಿತು. ರೇಂಜ್ ಫಾರೆಸ್ಟ್ ಆಫೀಸರ್ ಸಿ.ವಿ.ವಿನೋದ್ಕುಮಾರ್, ಆರ್ಆರ್ಟಿ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ ಮಧುಸೂದನನ್, ಕಾರಡ್ಕ ಸೆಕ್ಷನ್ ಫಾರೆಸ್ಟರ್ ಕೆ.ಎ.ಬಾಬು, ಆರ್ಆರ್ಟಿ ಅಧಿಕಾರಿ ಬಾಬು ಪಾಣತ್ತೂರು, ಮಸೂದ್, ಅಬ್ದುಲ್ಲಕುಂಞಿ, ಬೀಟ್ ಫಾರೆಸ್ಟ್ ಆಫೀಸರ್ಗಳು, ಆರ್ಆರ್ಟಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರು.