ಏಕಮನಸ್ಸಿನಿಂದ ದೇಶಕ್ಕೆ ಸಮರ್ಪಣೆ Ambika Puttur

ಬಪ್ಪಳಿಗೆಯಲ್ಲಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಿತು. ಪ್ರಮುಖರಾದ ಎಂ.ಎನ್.ಭೋಜೇಗೌಡ, ಸುಬ್ರಹ್ಮಣ್ಯ ನಟ್ಟೋಜ, ರಾಜಶ್ರೀ ಎಸ್.ನಟ್ಟೋಜ ಮತ್ತಿತರರಿದ್ದರು.
ಬಪ್ಪಳಿಗೆಯಲ್ಲಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಿತು. ಪ್ರಮುಖರಾದ ಎಂ.ಎನ್.ಭೋಜೇಗೌಡ, ಸುಬ್ರಹ್ಮಣ್ಯ ನಟ್ಟೋಜ, ರಾಜಶ್ರೀ ಎಸ್.ನಟ್ಟೋಜ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಬಣ್ಣನೆ
  • ಐತಿಹಾಸಿಕ ಕಾರ್ಯಕ್ರಮವಾಗಿ ಬದಲಾದ ಅಂಬಿಕಾ ರಜತ ಮಹೋತ್ಸವ

ಪುತ್ತೂರು:ಭಾರತೀಯ ಸೇನೆಯಲ್ಲಿರುವಒಗ್ಗಟ್ಟು ವಿಶೇಷವಾಗಿದ್ದು, ಏಕಮನಸ್ಸಿನಿಂದ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದರಿಂದಲೇ ಪ್ರತಿಯೊಬ್ಬರಿಗೂ ಹುಮ್ಮಸ್ಸು ಮೂಡುತ್ತದೆ. ಬಿದ್ದವನನ್ನು ಬಿಟ್ಟು ಓಡುವುದಿಲ್ಲವಾದ್ದರಿಂದ ಭಾರತೀಯ ಸೇನೆ ಪ್ರಪಂಚದಲ್ಲೇ ವಿಶಿಷ್ಟವಾಗಿ ರೂಪುಗೊಂಡಿದೆ ಎಂದು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಹೇಳಿದರು.

ನಟ್ಟೋಜಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತಮಹೋತ್ಸವ ಆಚರಣೆ ಅಂಗವಾಗಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಎಂ.ಎನ್.ಭೋಜೇಗೌಡ,ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿದರು. ಮಡಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಪೆಮ್ಮಯ್ಯ ಅನಿಸಿಕೆ ವ್ಯಕ್ತಪಡಿಸಿದರು. ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಅಂಬಿಕಾಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ, ಮೇಜರ್ ಜನರಲ್ ಎಂ.ವಿ.ಭಟ್,ಕರ್ನಲ್ ಶರತ್ ಚಂದ್ರ ಭಂಡಾರಿ, ಕೊಡಗು ಜಿಲ್ಲೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಕ್ಯಾಪ್ಟನ್ ದಯಾನಂದ್, ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ ಕುಮಾರ್ ಮತ್ತಿತರರಿದ್ದರು. ಸುಂದರ ಗೌಡ ಸ್ವಾಗತಿಸಿದರು. ಸುಚಿತ್ರಾ ಪ್ರಭು ಸನ್ಮಾನ ಪತ್ರ ವಾಚಿಸಿದರು. ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಆದರ್ಶ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.

ದರ್ಬೆಯಲ್ಲಿಮೆರವಣಿಗೆಗೆ ಚಾಲನೆ

ದರ್ಬೆಸರ್ಕಲ್ ಬಳಿ ಮೆರವಣಿಗೆಯನ್ನು ವೈದ್ಯ ಡಾ.ಸುರೇಶ್ ಪುತ್ತೂರಾಯಉದ್ಘಾಟಿಸಿದರು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಹಿರಿಯ ವಕೀಲ ಮಹೇಶ್ ಕಜೆ, ಉದ್ಯಮಿ ಬಲರಾಮ ಆಚಾರ್ಯ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ರವಿಕೃಷ್ಣ ಕಲ್ಲಾಜೆ, ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ ಮತ್ತಿತರರಿದ್ದರು.

ರಥದಲ್ಲಿಮೆರವಣಿಗೆ

ಅಂಬಿಕಾಶಿಕ್ಷಣ ಸಂಸ್ಥೆಗಳನ್ನೊಳಗೊಂಡಂತೆ ಪುತ್ತೂರಿನ ವಿವಿಧ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಾಜಿ ಸೈನಿಕರ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಸಂಜಯ್ ಕುಮಾರ್ ಅವರನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದ ರಥದಲ್ಲಿ ಕುಳ್ಳಿರಿಸಿ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆಗೆ ಮೆರವಣಿಗೆ ನಡೆಸಿದರು. ರಾಷ್ಟ್ರಧ್ವಜ, ಡೊಳ್ಳು ಕುಣಿತ, ಚೆಂಡೆ, ಗೊಂಬೆ, ಸ್ತಬ್ಧಚಿತ್ರಗಳು, ಗೌರವ ಸೂಚಕ ಕೊಡೆಗಳು ಮೆರುಗು ನೀಡಿತು.

ಅಮರ್ಜವಾನ್ ಸ್ಮಾರಕದಲ್ಲಿ ರೀತ್

ಅಮರ್ಜವಾನ್ ಜ್ಯೋತಿ ಸ್ಮಾರಕದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆಗೈದವೀರ ಯೋಧರಿಗೆ ಸಂಜಯ್ ಕುಮಾರ್ ರೀತ್ ಸಮರ್ಪಿಸಿ ಗೌರವ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಮತ್ತಿತರರಿದ್ದರು.

ಸಂಯುಕ್ತಚಿಹ್ನೆಯ ಬಂಗಾರದ ಪ್ರತಿಕೃತಿ

ಅಂಬಿಕಾಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ನಟ್ಟೋಜ ಅವರು ವೈಯಕ್ತಿಕ ನೆಲೆಯಿಂದ ಮಿಲಿಟರಿ ಪಡೆಗಳ ಸಂಯುಕ್ತ ಚಿಹ್ನೆಯ ಬಂಗಾರದ ಪ್ರತಿಕೃತಿ ನೀಡಿ ಗೌರವಿಸಿದರು.

"

ದೇಶದ ಸಕಲ ಅನಾಹುತಗಳಿಗೆ ಶಿಕ್ಷಣ ಸಂಸ್ಥೆಗಳೇ ಕಾರಣ. ಮಕ್ಕಳಿಗೆ ದೇಶಭಕ್ತಿ, ಸಂಸ್ಕಾರ ಕೊಡದಿರುವುದೇ ಸಮಸ್ಯೆಗಳ ಮೂಲಕೇಂದ್ರ. ಈ ಹಿನ್ನೆಲೆಯಲ್ಲಿ ನಿರಂತರ ದೇಶಪ್ರೇಮ ಸಹಿತ ಶಿಕ್ಷಣವನ್ನು ಅಂಬಿಕಾದಲ್ಲಿ ಅಳವಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net