ವೇಯ್ಟ ಲಿಫ್ಟಿಂಗ್‌ನಲ್ಲಿ ಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಜಿಲ್ಲಾಮಟ್ಟದ ವೇಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಅವಳಿ ಪ್ರಶಸ್ತಿ ಪಡೆಯಿತು.
ಜಿಲ್ಲಾಮಟ್ಟದ ವೇಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಅವಳಿ ಪ್ರಶಸ್ತಿ ಪಡೆಯಿತು.
Published on

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದ.ಕ. ಮತ್ತು ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವೇಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಅವಳಿ ಪ್ರಶಸ್ತಿ ಪಡೆದಿದೆ.

ಬಾಲಕರ ವಿಭಾಗದಲ್ಲಿ 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕ ಗಳಿಸಿ 178 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ 5 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಒಟ್ಟು 8 ಪದಕ ಪಡೆದು 213 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು.

ಬಾಲಕರ ವಿಭಾಗ: 60 ಕೆಜಿ ರವಿ ಸಿದ್ದಪ್ಪ(ಪ್ರಥಮ), 65 ಕೆಜಿ ಯಶಸ್ ಜಿ.(ತೃತೀಯ), 71 ಕೆಜಿ ಹೇಮಂತ್ ಕೆ.ವಿ.(ದ್ವಿತೀಯ), 79 ಕೆಜಿ-ಶ್ರೇಯಸ್(ದ್ವಿತೀಯ), 88 ಕೆಜಿ-ಶಮಂತ್ ಶೆಟ್ಟಿ(ಪ್ರಥಮ), 94 ಕೆಜಿ ಪಾರ್ಥರಾಜ್ ಎಂ.(ಪ್ರಥಮ), 110 ಕೆಜಿ ಗಣೇಶ್ ಯು.(ಪ್ರಥಮ).

ಬಾಲಕಿಯರ ವಿಭಾಗ: 48 ಕೆಜಿ ಪಲ್ಲವಿ(ಪ್ರಥಮ), 53 ಕೆಜಿ ಮೈತ್ರಿ ರೆಲೆಕರ್(ದ್ವಿತೀಯ), ದೀಪಿಕಾ ಕುರಗೋಡು(ತೃತೀಯ), 58 ಕೆಜಿ ಕಾಂಚನಾ ಭೀಮಪ್ಪ(ಪ್ರಥಮ), 63 ಕೆಜಿ-ಸಿಂಚನಾ ಎಂ.(ಪ್ರಥಮ), 69 ಕೆಜಿ ನೀಲಾಂಬಿಕೆ ಜಿ.ಪಾಟೀಲ್(ಪ್ರಥಮ), 79 ಕೆಜಿ ಸ್ಫೂರ್ತಿ ಟಿ.ಜೆ.(ಪ್ರಥಮ), 86 ಕೆಜಿ ಅಶ್ವಿನಿ ಸಿದ್ದಪ್ಪ(ದ್ವಿತೀಯ) ಪಡೆದರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net