ಜೀವನಕ್ಕೆ ಅಗತ್ಯ ಮೌಲ್ಯಯುತ ಅನುಭವ : ವರುಣ್‌ರಾಜು ಪ್ರತಿಪಾದನೆ

ಜೀವನಕ್ಕೆ ಅಗತ್ಯ ಮೌಲ್ಯಯುತ ಅನುಭವ : ವರುಣ್‌ರಾಜು ಪ್ರತಿಪಾದನೆ   ಹಳೇ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ   ಆಳ್ವಾಸ್  ಕುವೆಂಪು ಸಭಾಂಗಣ    ಸಂವಾದ ಕಾರ್ಯಕ್ರಮ   ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನಿರ್ವಹಣಾ ವಿಭಾಗವು(ಬಿಬಿಎ) ಕಾಲೇಜಿನ ಐಕ್ಯುಎಸಿ ಅಡಿಯಲ್ಲಿ ಹಳೇ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತು.  ವಿಭಾಗದ ಹಳೇ ವಿದ್ಯಾರ್ಥಿ, ಉದ್ಯಮಿ ವರುಣ್‌ರಾಜು ಮಾತನಾಡಿ, ಮೌಲ್ಯಯುತ ಅನುಭವಗಳಿಂದ ಜೀವನ ರೂಪಿಸಿಕೊಳ್ಳುವುದು ಅಗತ್ಯ. 2015ರಲ್ಲಿ ನಾನು ಈ ಸಂಸ್ಥೆಗೆ ಸೇರಿದಾಗ ಸಂವಹನ ಕೌಶಲವೂ ಸೇರಿದಂತೆ ಅನೇಕ ವಿಷಯಗಳಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಆದರೆ ಅವಕಾಶ ಸ್ವೀಕರಿಸಿ, ತೊಡಗಿಸಿಕೊಳ್ಳುವುದರ ಮೂಲಕ ಜೀವನಕ್ಕೆ ದೊಡ್ಡ ತಿರುವು ಲಭಿಸಿತು ಎಂದರು.  ಜರ್ಮನಿಯಲ್ಲಿ ಉದ್ಯೋಗಿಯಾಗಿರುವ ಹಳೇ ವಿದ್ಯಾರ್ಥಿನಿ ವಂದನಾ ಮಾತನಾಡಿ, ಕಾರ್ಪೊರೇಟ್ ಜೀವನಕ್ಕೂ ವಿದ್ಯಾರ್ಥಿ ಜೀವನಕ್ಕೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ, ಗಡುವು, ಒತ್ತಡ, ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಜಗತ್ತನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಲೇಜಿನಲ್ಲಿರುವಾಗಲೇ ಕಾರ್ಪೊರೇಟ್ ಜೀವನಕ್ಕೆ ಸಿದ್ಧರಾಗುವುದು ಅಗತ್ಯ ಎಂದರು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಧೈರ್ಯ, ಪರಿಶ್ರಮ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಹಳೇ ವಿದ್ಯಾರ್ಥಿಗಳ ಅನುಭವಗಳು ನಿಮ್ಮ ಜೀವನಕ್ಕೂ ಮಾರ್ಗದರ್ಶನವಾಗಲಿ ಎಂದರು.  ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಕಾರ್ಯಕ್ರಮದ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಸೋನಿ, ವಿದ್ಯಾರ್ಥಿ ಸಂಯೋಜಕರಾದ ಸಪ್ತಶ್ರೀ ಹಾಗೂ ಸುಗಂಧಿ ಉಪಸ್ಥಿತರಿದ್ದರು. ಖುಷಿ ನಿರೂಪಿಸಿದರು. ಶ್ರೀಷ್ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು. ಸುಮನಾ, ವಿಸ್ಮಯಾ ಅತಿಥಿಗಳನ್ನು ಪರಿಚಯಿಸಿದರು.   ಎಂಬಿಡಿ _ಡಿಸೆಂಬರ್ 8_ 3 ಆಳ್ವಾಸ್ ಬಿಬಿಎ  ಆಳ್ವಾಸ್ ಬಿಬಿಎ ವಿಭಾಗದಿಂದ ಹಳೇ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಾಯಿತು.

Published on

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನಿರ್ವಹಣಾ ವಿಭಾಗವು(ಬಿಬಿಎ) ಕಾಲೇಜಿನ ಐಕ್ಯುಎಸಿ ಅಡಿಯಲ್ಲಿ ಹಳೇ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತು.

ವಿಭಾಗದ ಹಳೇ ವಿದ್ಯಾರ್ಥಿ, ಉದ್ಯಮಿ ವರುಣ್‌ರಾಜು ಮಾತನಾಡಿ, ಮೌಲ್ಯಯುತ ಅನುಭವಗಳಿಂದ ಜೀವನ ರೂಪಿಸಿಕೊಳ್ಳುವುದು ಅಗತ್ಯ. 2015ರಲ್ಲಿ ನಾನು ಈ ಸಂಸ್ಥೆಗೆ ಸೇರಿದಾಗ ಸಂವಹನ ಕೌಶಲವೂ ಸೇರಿದಂತೆ ಅನೇಕ ವಿಷಯಗಳಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಆದರೆ ಅವಕಾಶ ಸ್ವೀಕರಿಸಿ, ತೊಡಗಿಸಿಕೊಳ್ಳುವುದರ ಮೂಲಕ ಜೀವನಕ್ಕೆ ದೊಡ್ಡ ತಿರುವು ಲಭಿಸಿತು ಎಂದರು.

ಜರ್ಮನಿಯಲ್ಲಿ ಉದ್ಯೋಗಿಯಾಗಿರುವ ಹಳೇ ವಿದ್ಯಾರ್ಥಿನಿ ವಂದನಾ ಮಾತನಾಡಿ, ಕಾರ್ಪೊರೇಟ್ ಜೀವನಕ್ಕೂ ವಿದ್ಯಾರ್ಥಿ ಜೀವನಕ್ಕೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ, ಗಡುವು, ಒತ್ತಡ, ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಜಗತ್ತನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಲೇಜಿನಲ್ಲಿರುವಾಗಲೇ ಕಾರ್ಪೊರೇಟ್ ಜೀವನಕ್ಕೆ ಸಿದ್ಧರಾಗುವುದು ಅಗತ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಧೈರ್ಯ, ಪರಿಶ್ರಮ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಹಳೇ ವಿದ್ಯಾರ್ಥಿಗಳ ಅನುಭವಗಳು ನಿಮ್ಮ ಜೀವನಕ್ಕೂ ಮಾರ್ಗದರ್ಶನವಾಗಲಿ ಎಂದರು.

ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಕಾರ್ಯಕ್ರಮದ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಸೋನಿ, ವಿದ್ಯಾರ್ಥಿ ಸಂಯೋಜಕರಾದ ಸಪ್ತಶ್ರೀ ಹಾಗೂ ಸುಗಂಧಿ ಉಪಸ್ಥಿತರಿದ್ದರು. ಖುಷಿ ನಿರೂಪಿಸಿದರು. ಶ್ರೀಷ್ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು. ಸುಮನಾ, ವಿಸ್ಮಯಾ ಅತಿಥಿಗಳನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net