ಅಖಿಲ ಭಾರತ ಅಥ್ಲೆಟಿಕ್ಸ್ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
Published on:
Copied
Follow Us
ಸೇಲಂ ಪರಿಯಾರ್ ವಿವಿಯ ಎಸ್.ಕವಿನ್ರಯ್ಯ ಹಾಗೂ ಗುರುಕಾಶಿ ವಿವಿಯ ರಾಮ್‌ರತನ್(5.10) ಅಷ್ಟೇ ಎತ್ತರ ಜಿಗಿದು ಹಿಂದಿನ ದಾಖಲೆ ಮುರಿದರೂ, ಒಟ್ಟು ಪೌಲ್‌ಗಳ ಆಧಾರದಲ್ಲಿ ಕುಲ್ದೀಪ್ ಯಾದವ್ ವಿಜಯಿಯಾದ ಕಾರಣ, ನೂತನ ಕೂಟ ದಾಖಲೆ ಅವರ ಪಾಲಾಯಿತು.
ಮಹಿಳಾ ವಿಭಾಗದ ಪೋಲ್‌ವಾಲ್ಟ್‌ನಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ವಂಶಿಕಾ, ಕಾರ್ತಿಕಾ ಮತ್ತು ನೇಖಾ ಮೂವರ ಜಿಗಿತ(3.70 ಮೀ. ಎತ್ತರ) ಸಮವಾಗಿತ್ತು, ಹಿಂದಿನ ಫೌಲ್‌ಗಳ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಯಿತು.
100 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ಮಹಿಳೆಯರು ಅಕ್ಷರಶಃ ಮೇಲುಗೈ ಸಾಧಿಸಿದರು. ಅಕ್ಷಿದಾ ಮತ್ತು ಶ್ರೀರೇಷ್ಮಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಒಂದು ಸೆಕೆಂಡ್ ಅನ್ನು ಸಾವಿರ ವಿಭಾಗಿಸಿದಾಗ(.003) ಅಂತರ ಕಂಡು ಬಂದಿದ್ದು, ಅಕ್ಷಿದಾ ಚಿನ್ನಕ್ಕೆ ಪಾತ್ರರಾದರು. ಕಂಚು ಕೂಡ ಚೆನ್ನೈ ಪಾಲಾಯಿತು. ಸ್ಪರ್ಧಾ ಫಲಿತಾಂಶ ಕ್ರೀಡಾಕೂಟದ ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ವ್ಯವಸ್ಥೆಯನ್ನು ಸಾಕ್ಷೀಕರಿಸಿತು.
*ಉಡುಪಿಯ ಶ್ರೀದೇವಿಕಾಗೆ ಬೆಳ್ಳಿ: ದೂರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯದ ಶ್ರೀದೇವಿಕಾ ವಿ.ಎಸ್. ಪಡೆದಿದ್ದಾರೆ. ಉಡುಪಿ ಮೂಲದ ಅವರು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ. ವಸಂತ ಜೋಗಿ ತರಬೇತಿಯಲ್ಲಿ ಪಳಗಿದ್ದಾರೆ.
1500 ಮೀ. ಓಟ: ವಿಕಾಸ್, ಚಂಡೀಗಢದ ಪಂಜಾಬ್ ವಿವಿ (3:44.83 ನಿ. ಸಮಯ)-1, ಆಕಾಶ್ ಭಾಟಿ, ರೋಹ್ತಕ್ ಎಂ.ಡಿ.ಯು. ವಿವಿ (3:45.06)-2, ಯೋಗೇಶ್ ಕುಮಾರ್ ದಿಂಡಾವಾಲಾ, ಚೆನ್ನೈ ಮದ್ರಾಸ್ ವಿವಿ (3:45.07)-3.
ಮಹಿಳೆಯರ ವಿಭಾಗ
ಪೋಲ್ ವಾಲ್ಟ್: ವಂಶಿಕಾ ಗಂಘಾಸ್, ಮೊಹಾಲಿ ಚಂಡೀಗಢ ವಿವಿ (3.70ಮೀ. ಎತ್ತರ)-1, ಕಾರ್ತಿಕಾ ವಿ., ಚೆನ್ನೈ ಮದ್ರಾಸ್ ವಿ.ವಿ. (3.70)-2, ನೇಖಾ ಎಲ್ದೋ, ಕೇರಳದ ಕ್ಯಾಲಿಕಟ್ ವಿವಿ (3.70)-3. (ಜಿಗಿತದ ಎತ್ತರ ಸಮವಾದರೆ, ಫೌಲ್‌ಗಳನ್ನು ಪರಿಗಣಿಸಿ ಸ್ಥಾನ ನಿರ್ಧರಿಸಲಾಗುತ್ತದೆ.)
ಲಾಂಗ್ ಜಂಪ್: ಮುಬಾಸ್ಸಿನಾ ಮೊಹಮ್ಮದ್, ಆಂಧ್ರಪ್ರದೇಶದ ಎಸ್.ಆರ್.ಎಂ. ವಿ.ವಿ. (6.15ಮೀ.)-1, ಶ್ರೀದೇವಿಕಾ ವಿ.ಎಸ್., ಮಂಗಳೂರು ವಿ.ವಿ (6.06ಮೀ.)-2, ಒ. ಪಮಿಲಾ ವರ್ಷಿಣಿ, ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (5.87ಮೀ.)-3.
ಹೆಪ್ಟಾಥ್ಲಾನ್: ಅನಾಮಿಕಾ, ಆಂಧ್ರಪ್ರದೇಶ ಎಸ್.ಆರ್.ಎಂ. ವಿ.ವಿ (5158 ಅಂಕ)-1, ಕೀರ್ತಿ ಈಶ್ವರ್‌ಲಾಲ್, ಪಂಜಾಬ್ ಲವ್ಲೀ ಪ್ರೊಫೆಷನ್ ವಿ.ವಿ. (4979)-2, ಇಶಾ ನೇಗಿ, ಭುವನೇಶ್ವರ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (4949)-3.