ಬೇಡಿಕೆ ಪೂರೈಕೆಗೆ ಪ್ರಯತ್ನ Alike

ಅಳಿಕೆ ಗ್ರಾಮದ ಫಲಾನುಭವಿಗಳಿಗೆ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಗ್ಯಾಸ್ ಕಿಟ್ ವಿತರಿಸಿದರು. ಪಂಚಾಯಿತಿ ಅಭಿವೃದ್ಧಿ ಅಽಕಾರಿ ಉದಯ, ಉಪಾಧ್ಯಕ್ಷೆ ಸರೋಜಿನಿ, ಸದಸ್ಯರು ಉಪಸ್ಥಿತರಿದ್ದರು.
ಅಳಿಕೆ ಗ್ರಾಮದ ಫಲಾನುಭವಿಗಳಿಗೆ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಗ್ಯಾಸ್ ಕಿಟ್ ವಿತರಿಸಿದರು. ಪಂಚಾಯಿತಿ ಅಭಿವೃದ್ಧಿ ಅಽಕಾರಿ ಉದಯ, ಉಪಾಧ್ಯಕ್ಷೆ ಸರೋಜಿನಿ, ಸದಸ್ಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪದ್ಮನಾಭ ಪೂಜಾರಿ ಸಣ್ಣಗುತ್ತು ಆಶಯ
  • ಫಲಾನುಭವಿಗಳಿಗೆ ಸವಲತ್ತು ವಿತರಣೆ
ವಿಟ್ಲ: ಅಳಿಕೆ ಗ್ರಾಮಕ್ಕೆ ೫ ವರ್ಷದಲ್ಲಿ ಜನರ ಬೇಡಿಕೆಗಳನ್ನು ಪೂರೈಸುವ ಪ್ರಯತ್ನ ಮಾಡಲಾಗಿದೆ. ೧೫ನೇ ಹಣಕಾಸಿನಲ್ಲಿ ೧.೬೮ ಕೋಟಿ, ಪಂಚಾಯಿತಿ ಸ್ವಂತ ನಿಧಿಯಲ್ಲಿ ೭೮.೫೦ ಲಕ್ಷ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ೧.೦೯ ಕೋಟಿ ರೂ. ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.
ಅಳಿಕೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಸಭೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ರೈ ಅಭಿನಂದನಾ ಭಾಷಣ ನಡೆಸಿದರು. ಅಳಿಕೆ ಗ್ರಾಪಂನ ಸ್ವಂತ ನಿಽಯ ಶೇ.೨೫ರ ನಿಧಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ೮ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ೮ ಮಂದಿಗೆ ಗ್ಯಾಸ್ ಸಂಪರ್ಕ, ೫ ಮಂದಿಗೆ ಮನೆ ದುರಸ್ತಿಗೆ ಸಹಾಯಧನ ನೀಡಲಾಯಿತು. ಶೇ.೫ರ ನಿಽಯಿಂದ ವಿಕಲಚೇತನರ ಶ್ರೇಯೋಭಿವೃದ್ಧಿಗೆ ಸಹಾಯಧನ ವಿತರಣೆ ಮಾಡಲಾಯಿತು. ಸುಮಾರು ೩ ಲಕ್ಷ ರೂ. ಮೊತ್ತದ ಸವಲತ್ತು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಜಗದೀಶ್, ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮುರಳಿ, ಗ್ರಾಮಕರಣಿಕ ಸತೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲೋಲಾಕ್ಷಿ, ಹಿಂದೆ ಕಾರ್ಯನಿರ್ವಹಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ, ಅಜಿತ್, ಅಂಚೆ ಪಾಲಕ ಈಶ್ವರ ಎಂ., ಸಿಆರ್‌ಪಿ ಚಂದ್ರಶೇಖರ ಕೆ., ಮುಖ್ಯ ಶಿಕ್ಷಕರಾದ ಗೀತಾ, ಈಶ್ವರ ನಾಯ್ಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಜಗದೀಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ಸದಾಶಿವ ಶೆಟ್ಟಿ, ಕಾನ ಈಶ್ವರ ಭಟ್, ಸುಕುಮಾರ, ರವೀಶ್, ಸರಸ್ವತಿ, ಬಬಿತ, ಶಾಂಭವಿ, ಗಿರಿಜಾ, ಶಶಿಕಲಾ, ಭಾಗೀರಥಿ, ಸೆಲ್ವಿನಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉದಯ ಕಾರ್ಯಕ್ರಮ ನಿರೂಪಿಸಿದರು.
"

ಶಾಸಕ ಅಶೋಕ್ ಕುಮಾರ್ ರೈ ಅವರು ೮.೩೦ ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದ್ದು, ೧.೩೦ ಕೋಟಿ ರೂ. ಅನುದಾನ ಕಾಮಗಾರಿ ನಡೆಯಬೇಕಾಗಿದೆ. ಎಂ.ಎಲ್.ಸಿ. ಮಂಜುನಾಥ ಭಂಡಾರಿ ಅವರು ೫ ಲಕ್ಷ ರೂ. ಅನುದಾನ ಒದಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net