ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಉದಯ ಪ್ರಕಾಶ್ ಮುಳಿಯ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಡಾ.ವಿಜಯಸರಸ್ವತಿ, ಚಂದ್ರಶೇಖರ ಭಟ್ ಎಸ್., ಕೆ.ಎಸ್.ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ: ಅಳಿಕೆ ವಿದ್ಯಾಸಂಸ್ಥೆಯಲ್ಲಿ ಕಲಿತವರಿಗೆ ಜಗತ್ತಲ್ಲಿ ಎಲ್ಲಿ ಹೋದರೂ ಬದುಕ ಬಲ್ಲ ಧೈರ್ಯ ಇದೆ. ಜ್ಞಾನ ತುಂಬಿಕೊಳ್ಳುವ ಜತೆಗೆ ಮೌಲ್ಯಯುತ ಜೀವನ ನಡೆಸಬೇಕು ಎಂದು ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಉದಯ ಪ್ರಕಾಶ್ ಮುಳಿಯ ಹೇಳಿದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ವಿದ್ಯಾಗಣಪತಿ ಮಹೋತ್ಸವ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವೇಕಾನಂದ ಕಾಲೇಜಿನ ಡಾ.ವಿಜಯಸರಸ್ವತಿ ಮಾತನಾಡಿ, ದೇವರ ತ್ರಿಕಾಲ ನಾಮಸ್ಮರಣೆ ಎಲ್ಲ ಶತ್ರುಗಳನ್ನು ನಿರ್ನಾಮಗೊಳಿಸುವುದು. ಯಾರ ಜತೆಗೆ ಬೆರೆಯುತ್ತೇವೊ ಅವರ ಗುಣ ಪ್ರಾಪ್ತಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಾದ ಚಿರಂತನ ಬಿ.ಎಂ., ಸುಹಾಸ್ ಸುಮಧುರ್ ಗಣಪತಿಯ ಮಹತ್ವದ ಬಗ್ಗೆ ಮಾತಾಡಿದರು. ಸೌರವ್ ಬಿ.ಪಿ. ಹಾಡಿದರು. ಶ್ರೀ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್‌ನ ಕೆ.ಎಸ್.ಕೃಷ್ಣ ಭಟ್ ಉಪಸ್ಥಿತರಿದ್ದರು.
ಪಪೂ ಕಾಲೇಜಿನ ಉಪನ್ಯಾಸಕ ಅನಂತಪ್ರಸಾದ್ ಬಿ. ಸ್ವಾಗತಿಸಿದರು. ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸಂಚಾಲಕ ಚಂದ್ರಶೇಖರ ಭಟ್ ಎಸ್. ಪ್ರಸ್ತಾವನೆಗೈದರು. ಟ್ರಸ್ಟಿನ ಆಡಳಿತಾಽಕಾರಿ ಜನಾರ್ದನ ನಾಯಕ್ ಎಸ್. ವಂದಿಸಿದರು. ಪಪೂ ಕಾಲೇಜಿನ ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು.