ಅಡಕೆ ಕ್ಷೇತ್ರದ ದಿಗ್ಗಜರಿಂದ ಅಗ್ರಿಲೀಫ್ ಭೇಟಿ

ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಕೇಂದ್ರ ಕಚೇರಿ ಹಾಗೂ ಕಾರ್ಖಾನೆಗೆ ಅಡಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಭೇಟಿ ನೀಡಿತು.
ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಕೇಂದ್ರ ಕಚೇರಿ ಹಾಗೂ ಕಾರ್ಖಾನೆಗೆ ಅಡಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಭೇಟಿ ನೀಡಿತು.
Published on
ಅಗ್ರಿಲೀಫ್ ಸಂಸ್ಥೆಯ ಸಂಪೂರ್ಣ ಕಾರ್ಖಾನೆ ವ್ಯವಸ್ಥೆ, ಉತ್ಪಾದನಾ ಪ್ರಕ್ರಿಯೆ ಮತ್ತು ತಾಂತ್ರಿಕ ಅನುಷ್ಠಾನಗಳ ಬಗ್ಗೆ ನಿಯೋಗಕ್ಕೆ ವಿವರಿಸಲಾಯಿತು. ವಿಶೇಷವಾಗಿ ಎಐ ಆಧಾರಿತ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಅಡಕೆಯನ್ನು ಗ್ರೇಡಿಂಗ್ ಮಾಡುವ ಹೊಸ ಆವಿಷ್ಕಾರಗಳ ಬಗ್ಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು. ಅಗ್ರಿಲೀಫ್ ಅಳವಡಿಸಿಕೊಂಡಿರುವ ಸ್ವಯಂಚಾಲಿತ ತಾಂತ್ರಿಕ ವ್ಯವಸ್ಥೆ, ಗುಣಮಟ್ಟದ ನಿಯಂತ್ರಣ ಕ್ರಮಗಳು ಹಾಗೂ ಕಾರ್ಯಕ್ಷಮತೆಯನ್ನು ವೀಕ್ಷಿಸಿದ ತಜ್ಞರ ತಂಡ, ತಂತ್ರಜ್ಞಾನ ಅಳವಡಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುವ ಬಗೆ, ಉತ್ಪಾದನಾ ವೆಚ್ಚ ಕಡಿತಗೊಳಿಸುವ ತಂತ್ರಗಾರಿಕೆ ಹೊಂದಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿತು.
ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಶಿರಸಿಯ ತೋಟಗಾರ್ಸ್ ಸಹಕಾರಿ ಮಾರಾಟ ಸಂಘ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ಅಧ್ಯಕ್ಷ ಶಿವಕುಮಾರ್, ಮಲ್ನಾಡ್ ಅಡಕೆ ಮಾರಾಟ ಸಹಕಾರಿ ಸಂಘ ಉಪಾಧ್ಯಕ್ಷ ವಿ.ಪಿ.ಮಹೇಶ್, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ ಅಧ್ಯಕ್ಷ ಮಹೇಶ್ ಪುಚ್ಚಪಾಡಿ, ಎಆರ್‌ಡಿಎಫ್ ಮಂಗಳೂರಿನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಕೇಶವ ಭಟ್, ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುಡಿ, ವಿಟ್ಲದ ರೈತ ವಿಜ್ಞಾನಿ ಬದನಾಜೆ ಶಂಕರ ಭಟ್ ಉಪಸ್ಥಿತರಿದ್ದರು.

ನಾನೂ ಹಾಳೆತಟ್ಟೆಗಳನ್ನು ಮಾಡಿದ್ದೇನೆ. ಆದರೆ ಈ ರೀತಿಯ ತಂತ್ರಜ್ಞಾನ ಆಧಾರಿತ ಉತ್ಪಾದನೆಯನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ. ಇದು ಈ ಕಾಲದ ಅಗತ್ಯವೂ ಹೌದು. ಅಗ್ರಿಲೀಫ್ ಕೈಗೊಂಡಿರುವ ಈ ಹೊಸ ಪ್ರಯತ್ನಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net