ಕುಕ್ಕೆ ದೇವಳಕ್ಕೆ ನಟ ಸುಮನ್ ಭೇಟಿ

ಚಲನಚಿತ್ರ ನಟ ಸುಮನ್ ಅವರು ಕುಕ್ಕೆ ದೇವಳಕ್ಕೆ ಭೇಟಿ ನೀಡಿದರು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಪ್ರಮುಖರಾದ ಜಯರಾಮ್ ರಾವ್, ಮಾಧವ ಪದೇಲ ಉಪಸ್ಥಿತರಿದ್ದರು.
ಚಲನಚಿತ್ರ ನಟ ಸುಮನ್ ಅವರು ಕುಕ್ಕೆ ದೇವಳಕ್ಕೆ ಭೇಟಿ ನೀಡಿದರು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಪ್ರಮುಖರಾದ ಜಯರಾಮ್ ರಾವ್, ಮಾಧವ ಪದೇಲ ಉಪಸ್ಥಿತರಿದ್ದರು.
Published on

ದೇವಳದಲ್ಲಿ ಅವರು ನಾಗ ಪ್ರತಿಷ್ಠಪನೆ, ಆಶ್ಲೇಷ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. ಬಳಿಕ ದೇವರ ದರುಶನ ಪಡೆದ ಅವರಿಗೆ ಅರ್ಚಕರು ಮಹಾಪ್ರಸಾದ ನೀಡಿ ಹರಸಿದರು. ಬಳಿಕ ಅವರು ಹೊಸಳಿಗಮ್ಮನ ದರುಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿದರು. ನಂತರ ಆಡಳಿತ ಕಚೇರಿಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಸುಮನ್ ಅವರನ್ನು ಗೌರವಿಸಿದರು. ಮಾಸ್ಟರ್ ಪ್ಲಾೃನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು, ದೇವಳ ಎಇಒ ಎಸ್.ಜೆ.ವೈ.ರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್, ಶಿಷ್ಟಾಚಾರ ವಿಭಾಗದ ಮಾಧವ ಪದೇಲ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net