ಕುಂಬಳೆಯಲ್ಲಿ ಶುಕ್ರವಾರ ಜರುಗಿದ ಸರ್ವಪಕ್ಷ ಕ್ರಿಯಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜ.19ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜನಪ್ರತಿನಿಧಿಗಳ ಪ್ರತಿಭಟನಾ ಸಂಗಮ ನಡೆಯಲಿದೆ. ಮಂಜೇಶ್ವರ- ಕಾಸರಗೋಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸದಸ್ಯರು, ಕಾಸರಗೋಡು ನಗರಸಭೆ ಕೌನ್ಸಿಲರ್‌ಗಳು ಭಾಗವಹಿಸುವರು. ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ತಡೆಯಬೇಕೆಂದು ಆಗ್ರಹಿಸಿ ಕ್ರಿಯಾ ಸಮಿತಿ ನೀಡಿದ ಅರ್ಜಿಯನ್ನು ಹೈಕೋರ್ಟ್ ಜ.21ರಂದು ಪರಿಗಣಿಸಲಿದೆ.