ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಹತ್ತು ವರ್ಷಗಳ ನಂತರ ಬಂಧನ

ವಸತಿಗೃಹದಲ್ಲಿ ಯುವತಿಯ ಮೇಲೆ ದೌರ್ಜನ್ಯ ಎಸಗಿ ಬಂಧನ ಬಳಿಕ ತಲೆಮರೆಸಿಕೊಂಡಿದ್ದ
ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಹತ್ತು ವರ್ಷಗಳ ನಂತರ ಬಂಧನ
Published on: 

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯ ವಸತಿಗೃಹದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಯನ್ನು 10 ವರ್ಷಗಳ ನಂತರ ಬಂಧಿಸಲಾಗಿದೆ. ವಯನಾಡ್ ಮೂಲದ ಬಿಜು ಸಿ.ಜೆ. ಅಲಿಯಾಸ್ ಆಂಟೋನಿ ಬಿಜು(44) ಬಂಧಿತ. ಜಿಲ್ಲಾ ಪೊಲೀಸ್ ಮುಖ್ಯಸ್ಥರ ನೇತೃತ್ವದಲ್ಲಿ ಕಾರ್ಯಾಚರಿಸಿದ ವಿಶೇಷ ತಂಡದ ಸಹಾಯದಿಂದ ಮಂಜೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

2016ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಯುವತಿ ನೀಡಿದ ದೂರಿನನ್ವಯ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಬಿಡುಗಡೆಗೊಂಡಿದ್ದ ಈತ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ದಸ್ತಾವೇಜು ನೋಂದಣಿಗೆ ಲಂಚ ಕೇಳಿದ ಉಪ-ನೋಂದಣಾಧಿಕಾರಿ ವಿರುದ್ಧ ಪ್ರಕರಣ

ಕಾಸರಗೋಡು: ವಿಜಿಲೆನ್ಸ್ ವಿಭಾಗವು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕೋಯಿಕ್ಕೋಡಿನ ತಾಮರಶ್ಯೇರಿ ಉಪ-ನೋಂದಣಾ ಕಚೇರಿ ಅಧಿಕಾರಿ ಸನಿಲ್ ಜೋಸ್ ಅವರು ದಾಖಲೆ ಬರಹಗಾರರು ಮತ್ತು ಆಸ್ತಿ ಮಾರಾಟಗಾರರಿಂದ ಒಂದು ಲಕ್ಷ ರೂ.ಗೂ ಹೆಚ್ಚು ಮೊತ್ತ ಲಂಚದ ರೂಪದಲ್ಲಿ ಪಡೆದಿರುವುದನ್ನು ಪತ್ತೆಹಚ್ಚಲಾಗಿದೆ.

ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಆದೇಶದ ಮೇರೆಗೆ, ಉತ್ತರ ವಲಯದ ವಿಜಿಲೆನ್ಸ್ ಎಸ್‌ಪಿ ಬಾಲಕೃಷ್ಣನ್ ನಾಯರ್ ಅವರು ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಸನಿಲ್ ಜೋಸ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net