

ಕಾಸರಗೋಡು: ಮಾದಕ ದ್ರವ್ಯ ಸಾಗಾಟದ ಹಲವು ಪ್ರಕರಣಗಳಿಗೆ ಸಂಬಂಧಿಸಿ ಕಾಞಂಗಾಡು ಕುರಂದೂರ್ ನಿವಾಸಿ ಅಬ್ದುಲ್ ಸಫ್ವಾನ್(31) ಎಂಬಾತನನ್ನು ಕಾಪಾ ಕಾಯ್ದೆಯನ್ವಯ ಪೊಲೀಸರು ಬಂಧಿಸಿದ್ದಾರೆ. ಆಪರೇಷನ್ ತೂಫಾನ್ ಅಂಗವಾಗಿ ಹೊಸದುರ್ಗ ಠಾಣೆ ಪೊಲೀಸರು ಕಾಪಾ ಕಾಯ್ದೆಯಂತೆ ಆರೋಪಿಯನ್ನು ಬಂಧಿಸಿದ್ದು, ಬಳಿಕ ಕಣ್ಣೂರು ಕೇಂದ್ರ ಕಾರಾಗಹಕ್ಕೆ ಕಳುಹಿಸಿದ್ದಾರೆ. ಹೊಸದುರ್ಗ ಮತ್ತು ನಿಲೇಶ್ವರ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿ ಸಫ್ವಾನ್ ವಿರುದ್ಧ ಎಂಟು ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿರಂತರ ಮಾದಕ ವಸ್ತು ಮಾರಾಟ, ಸಾಗಾಟ, ಸೇವನೆ ಪ್ರಕರಣದಲ್ಲಿ ನಿರತನಾಗುತ್ತಿದ್ದ ಈತನನ್ನು 2024ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಾಪಾ ಕಾಯ್ದೆಯಡಿ ಬಂಧಿಸಿ ಕಾರಾಗೃಹದಲ್ಲಿ ಇರಿಸಲಾಗಿತ್ತು. ಬಳಿಕ ಹೊರಬಂದ ನಂತರ ದಂಧೆ ಮುಂದುವರಿಸಿದ್ದ. ಹೊಸದುರ್ಗ ಠಾಣಾಧಿಕಾರಿ ಸಿ.ವಿ.ಪ್ರೇಮನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.