

ಕಾಸರಗೋಡು: ಎರ್ನಾಕುಳಂ ವಿವಾನ ನಿಲ್ದಾಣ ರಸ್ತೆಯಲ್ಲಿ ಸುಳ್ಯ ಕನಕಮಜಲು ನಿವಾಸಿ ಇಜಾಸ್ ಸೇರಿದಂತೆ ಮೂವರ ಸಾವಿಗೆ ಕಾರಣವಾಗಿರುವ ಐಷಾರಾಮಿಕಾರಿನ ಚಾಲಕ ಅಪಘಾತ ನಡೆದ ಕೆಲವು ತಾಸುಗಳ ಅವಧಿಯೊಳಗೆ ನಿರಂತರ ಮದ್ಯಪಾನ ನಡೆಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಇನ್ನೊಂದೆಡೆ 23ವರ್ಷ ಪ್ರಾಯದೊಳಗಿನವರಿಗೆ ಮದ್ಯ ಪೂರೈಸಿದ ಮೂರು ಬಾರ್ ಸಿಬ್ಬಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸುಹೈಲ್ ಹಾಗೂ ಈತನ ಸಹಚರ ನಿನಾ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇವರಿಬ್ಬರೂ 18ರಿಂದ 21ವರ್ಷ ವಯಸ್ಸಿನವರಾಗಿದ್ದು, ಸರ್ಕಾರದ ಕಾನೂನು ಪ್ರಕಾರ ಈ ವಯಸ್ಸಿನವರು ಬಂಧಿತರಲ್ಲಿ ಇವರಿಗೆ ಉತ್ತಮ ನಡೆತೆಗಾಗಿ ಕಾರಾಗೃಹ ಸೆಲ್ಲಿನಲ್ಲಿರುವ ದುರ್ನಡತೆ ಪರಿಹಾರ ಶಾಲೆಗೆ ದಾಖಲಿಸಲಾಗಿದೆ.