ದ್ವಿಚಕ್ರ ವಾಹನಗಳ ಕಳವು ಆರೋಪಿ ಬಂಧನ

ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲು
ಬಂಧನ
ಬಂಧನ
Published on: 

ಕಾಸರಗೋಡು: ಹಲವು ದ್ವಿಚಕ್ರ ವಾಹನ ಕಳವು ಪ್ರಕರಣಗಳ ಆರೋಪಿ, ನೀಲೇಶ್ವರ ಚೆರುಪುರಂ ಅರಿಂಗೋಳ ನಿವಾಸಿ ಸಮೀರ್ (30) ಎಂಬಾತನನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಳವುಗೈದ ಬೈಕ್‌ಗಳ ಪೈಕಿ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು ಇತರ ದ್ವಿಚಕ್ರ ವಾಹನಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ. ಸೆ.4ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಆವರಣದಲ್ಲಿ ಎರಡು ಬೈಕ್‌ಗಳು ಕಳವಾಗಿದ್ದವು. ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸಮೀರ್ ಕಳವು ಮಾಡಿರುವ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net