_1762271804447.webp?w=480&auto=format%2Ccompress&fit=max)
_1762271804447.webp?w=480&auto=format%2Ccompress&fit=max)
"ಹಳೇ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟು ಈ ಕಾರ್ಯಕ್ಕೆ ಮುಂದಡಿ ಇಟ್ಟೆವು. 10 ಸಾವಿರ ಮೇಲ್ಪಟ್ಟು ದೇಣಿಗೆ ನೀಡುವವರನ್ನು ದೂರವಾಣಿ ಮೂಲಕವೇ ಸಂಪರ್ಕಿಸಿ ದೇಣಿಗೆ ಸಂಗ್ರಹಿಸಿದ್ದೇವೆ. ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರು, ಹೇಮಂತ ರಾವ್ ಯರ್ಡೂರು, ರಾಮಕೃಷ್ಣ ನಾಯಕ್ ಮೊದಲಾದವರು ದೊಡ್ಡ ಮೊತ್ತ ನೀಡಿದ್ದಾರೆ. ಈ ಕಟ್ಟಡಕ್ಕೆ ಮತ್ತು ಪೂರಕ ಕೆಲಸಕ್ಕೆ 10 ಲಕ್ಷ ಖರ್ಚಾದರೆ, ನನ್ನ ಅಧ್ಯಕ್ಷ ಅವಧಿತ ಮೂರು ವರ್ಷಗಳಲ್ಲಿ 20 ಲಕ್ಷ ರೂ. ಗಳ ಕೆಲಸ ಆಗಿದೆ.
— ಹಾಜಿ ಅಬ್ದುಲ್ ಲೆತೀಫ್, ಎಸ್ಡಿಎಂಸಿ ಅಧ್ಯಕ್ಷ
ವೃತ್ತಿ ಬದುಕಿನ ಕೊನೆಯ ಹಂತದಲ್ಲಿರುವ ನಾನು ಇಲ್ಲಿಗೇ ಆಗಮಿಸಿ ನಾಲ್ಕು ವರ್ಷಗಳಾಗಿದ್ದು, ಎಲ್ಲ ರೀತಿಯಿಂದ ಎಸ್ಡಿಎಂಸಿ, ಪಾಲಕರಿಗೆ ಸಹಕರಿಸಿದ್ದೇನೆ. ಈ ಶಾಲೆಯ ಬಗ್ಗೆ ಇಲ್ಲಿನ ಹಳೇ ವಿದ್ಯಾರ್ಥಿಗಳಿಗಿರುವ ಅಭಿಮಾನ ನೋಡಿ ಖುಷಿಯಾಗಿದೆ. ನಿಜಕ್ಕೂ ಇಲ್ಲಿ ಮಾದರಿ ಕಾರ್ಯ ನಡೆದಿದೆ. ಶಿಕ್ಷಕರೂ ಇದಕ್ಕೆ ಕೈಜೋಡಿಸಿದ್ದಾರೆ.
— ಉಮಾ ಗೌಡ, ಮುಖ್ಯ ಶಿಕ್ಷಕಿ