ವೃದ್ಧಾಶ್ರಮ ನಡೆಸಲು ಸಹನೆ, ಭಾವನೆ ಮುಖ್ಯ Aalambana

ಚಿರಂತನ ಚಾರಿಟೆಬಲ್ ಟ್ರಸ್ಟ್‌ನ ಎರಡನೇ ಶಾಖೆ ಆಲಂಬನವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಲೋಕಾರ್ಪಣೆ ಮಾಡಿದರು. ಬೆಂಗಳೂರು ಸಪ್ತಕದ ಜಿ.ಎಸ್.ಹೆಗಡೆ, ಮಂಗಳೂರು ಎಂಆರ್‌ಪಿಎಲ್ ಮ್ಯಾನೇಜರ್ ಕೇಶವ ಪಟಾಳಿ, ಮಾಜಿ ಮೇಯರ್ ದಿವಾಕರ ಕದ್ರಿ ಇದ್ದರು.
ಚಿರಂತನ ಚಾರಿಟೆಬಲ್ ಟ್ರಸ್ಟ್‌ನ ಎರಡನೇ ಶಾಖೆ ಆಲಂಬನವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಲೋಕಾರ್ಪಣೆ ಮಾಡಿದರು. ಬೆಂಗಳೂರು ಸಪ್ತಕದ ಜಿ.ಎಸ್.ಹೆಗಡೆ, ಮಂಗಳೂರು ಎಂಆರ್‌ಪಿಎಲ್ ಮ್ಯಾನೇಜರ್ ಕೇಶವ ಪಟಾಳಿ, ಮಾಜಿ ಮೇಯರ್ ದಿವಾಕರ ಕದ್ರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಜಿತಕಾಮಾನಂದಜಿ ಅಭಿಮತ
ಪುತ್ತೂರು: ಹಿರಿಯ ನಾಗರಿಕರಿಕರಿಗೆ ಅವಶ್ಯಕವಾದ ವ್ಯವಸ್ಥೆಯನ್ನು ಚಿರಂತನ ಟ್ರಸ್ಟ್‌ನವರು ಮಾಡಿಕೊಂಡು ಬರುತ್ತಿದ್ದಾರೆ. ನೊಂದ ಜೀವಕ್ಕೆ ಆಲಂಬನೆ ನೀಡುವ ಅವಶ್ಯತೆಯಿದೆ. ಸಮಾಜಮುಖಿ ಸೇವೆಗಳ ಮೂಲಕ ದೇರಾಜೆ ಕುಟುಂಬ ದೇವರ ಸೇವೆ ಮಾಡುತ್ತಿದೆ. ಸಹನೆ, ಭಾವನೆ ಇದ್ದಾಗ ಮಾತ್ರ ವೃದ್ಧಾಶ್ರಮ ನಡೆಸಲು ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಚಿತಕಾಮಾನಂದಜಿ ಹೇಳಿದರು.
ವಿಟ್ಲ ಅಪ್ಪೇರಿಪಾದೆಯಲ್ಲಿ ಚಿರಂತನ ಚಾರಿಟೆಬಲ್ ಟ್ರಸ್ಟ್‌ನ ಎರಡನೇ ಶಾಖೆ ‘ಆಲಂಬನ’ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.
ಬೆಂಗಳೂರು ಸಪ್ತಕದ ಜಿ.ಎಸ್.ಹೆಗಡೆ, ಮಂಗಳೂರು ಎಂಆರ್‌ಪಿಎಲ್ ಮ್ಯಾನೇಜರ್ ಕೇಶವ ಪಟಾಳಿ, ಮಾಜಿ ಮೇಯರ್ ದಿವಾಕರ ಕದ್ರಿ, ವಿಟ್ಲ ಅರಮನೆಯ ಬಂಗಾರ ಅರಸರು, ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಎಚ್.ಸುಬ್ರಹ್ಮಣ್ಯ ಭಟ್, ಮೂರ್ತಿ ದೇರಾಜೆ, ಇಂದಿರಾ ಜಾನಕಿ, ಟ್ರಸ್ಟಿ ಶಿವಾನಂದ ರೈ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ಸೌಮ್ಯಲಕ್ಷ್ಮೀ ಭಟ್ ಸ್ವಾಗತಿಸಿದರು. ಟ್ರಸ್ಟಿ ಭಾರವಿ ದೇರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿ ಜೂನಿಯರ್ ಶಂಕರ್ ಕಾರ್ಯಕ್ರಮ ನಿರೂಪಿಸಿದರು.
"

ಅವಿಭಾಜ್ಯ ಕುಟುಂಬದಲ್ಲಿ ವೃದ್ಧಾಶ್ರಮದ ಅವಶ್ಯಕತೆಯಿಲ್ಲ. ಹಿಂದೆ ಬಾಂಧವ್ಯಗಳಿತ್ತು, ಈಗ ಕಾಲ ಬದಲಾವಣೆಯಾಗಿ ಕುಟುಂಬ ಸಣ್ಣದಾಗುತ್ತಿದೆ. ಹಾಗಾಗಿ ವೃದ್ಧಾಶ್ರಮದ ಅವಶ್ಯಕತೆ ಹೆಚ್ಚಾಗುತ್ತಿದೆ. ಆಶ್ರಮಗಳಲ್ಲಿ ಮಾನವ ರೂಪದ ಭಗವಂತನ ಸೇವೆ ನಡೆಯುತ್ತದೆ.

"

ಭಾರತದ ಕುಟುಂಬ ವ್ಯವಸ್ಥೆ ಶ್ರೇಷ್ಠ ಪರಂಪರೆಯಾಗಿದೆ. ಕೂಡು ಕುಟುಂಬ ಪಾಲಿಗೆ ಬಂದದ್ದನ್ನು ಅನುಭವಿಸುವುದನ್ನು ಕಲಿಸಿದೆ. ಸಂಗೀತ, ಸಾಹಿತ್ಯ ನಮ್ಮನ್ನು ಸಂಸ್ಕಾರಯುತರನ್ನಾಗಿಸುತ್ತದೆ. ಅರಿವೇ ಗುರು ಆದಾಗ ಎಲ್ಲವೂ ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net