ವಿಕಸಿತ ಭಾರತದಲ್ಲಿ ಯುವ ಪದವೀಧರರಿಗೆ ಮಹತ್ವದ ಪಾತ್ರ

ಯೇನೆಪೋಯ ವಿವಿ ಘಟಿಕೋತ್ಸವ
 ಯೇನೆಪೋಯ ವಿವಿ ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಮುಖರಾದ ಡಾ.ಯೇನೆಪೋಯ ಅಬ್ದುಲ್ಲಾ ಕುಂಞ, ಪ್ರೊ.ಜಗದೀಶ್ ಕುಮಾರ್ ಮಾಮಿಡಾಲ, ಡಾ.ಸುಧೀರ್ ಶ್ರೀವಾಸ್ತವ ಇನ್ನಿತರರು ಉಪಸ್ಥಿತರಿದ್ದರು.
ಯೇನೆಪೋಯ ವಿವಿ ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಮುಖರಾದ ಡಾ.ಯೇನೆಪೋಯ ಅಬ್ದುಲ್ಲಾ ಕುಂಞ, ಪ್ರೊ.ಜಗದೀಶ್ ಕುಮಾರ್ ಮಾಮಿಡಾಲ, ಡಾ.ಸುಧೀರ್ ಶ್ರೀವಾಸ್ತವ ಇನ್ನಿತರರು ಉಪಸ್ಥಿತರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ದೇಶ 2047ರಲ್ಲಿ ’ವಿಕಸತ ಭಾರತ’ ಆಗುವತ್ತ ಸಾಗುತ್ತಿದ್ದು ಇದರಲ್ಲಿ ಯುವ ಪದವೀಧರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಯೋಚನೆಗಳೊಂದಿಗೆ ಮುನ್ನಡೆಯಬೇಕಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ ಪರಿಶೀಲನಾ ಸಮಿತಿಯ ಅಧ್ಯಕ್ಷ ಪದ್ಮಶ್ರೀ ಪ್ರೊ.ಜಗದೀಶ್ ಕುಮಾರ್ ಮಾಮಿಡಾಲ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ಯೆನ್‌ಡ್ಯೂರೆನ್ಸ್ ಝೋನ್‌ನಲ್ಲಿ ಶನಿವಾರ ಆಯೋಜಿಸಲಾದ ಯೇನೆಪೋಯ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಮಾತನಾಡಿದರು.

ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗಾಗಿ ಎಸ್.ಎಸ್.ಇನ್ನೋವೇಷನ್ಸ್ ಇಂಟರ್‌ನ್ಯಾಷನಲ್ ಇಂಕ್ ಸಂಸ್ಥೆಯ ಸ್ಥಾಪಕ ಡಾ.ಸುಧೀರ್ ಶ್ರೀವಾಸ್ತವ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. 6,127 ವಿದ್ಯಾರ್ಥಿಗಳಿಗೆ ಪದವಿ, 11 ಮಂದಿಗೆ ಚಿನ್ನದ ಪದಕ, ಪಿಎಚ್.ಡಿ ಸಂಶೋಧನಾ ಪದವಿ, ದಂತವೈದ್ಯ, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಹೋಮಿಯೋಪತಿ, ವಿಜ್ಞಾನ, ಕಲೆ ಮತ್ತು ಸಮಾಜ ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಪದವಿ ಪ್ರದಾನ ಮಾಡಲಾಯಿತು.

ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೇನೆಪೋಯ ಅಬ್ದುಲ್ಲಾ ಕುಂಞ ಅಧ್ಯಕ್ಷತೆ ವಹಿಸಿದ್ದರು. ಝುಲೇಖ ಇನ್‌ಸ್ಟಿಟ್ಯೂಟ್ ಆಫ್ ಅಂಕೋಲಜಿ ನಿರ್ದೇಶಕ ಡಾ.ವಿಜಯ್ ಕುಮಾರ್, ಟ್ರಸ್ಟ್ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ವೇದಪ್ರಕಾಶ್ ಮಿಶ್ರಾ, ಡಾ.ಟಿ.ವಿ.ಕಟ್ಟಿಮನಿ, ಡಾ.ರಾಮಮೂರ್ತಿ ನಾಯ್ಡು, ಜಾವೇದ್ ಅಬ್ದುಲ್ಲ, ಡಾ.ಹಬೀಬ್ ರೆಹಮಾನ್ ಉಪಸ್ಥಿತರಿದ್ದರು.

ಕುಲಪತಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಟಿ.ನಂದೀಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕುಲಸಚಿವ ಡಾ.ಅಶ್ವಿನಿದತ್ತ್ ಆರ್.ವಂದಿಸಿದರು. ಡಾ.ಮಲ್ಲಿಕಾ ಶೆಟ್ಟಿ, ಡಾ.ಶಿಲ್ಪಾ ಕೆ.ಹಾಗೂ ನಿಲೀಶ ಕರ್ವಲ್ಲೋ ನಿರೂಪಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ನಾವೀನ್ಯತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಮಾನವೀಯ ಕಾಳಜಿಗೆ ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬ ರೋಗಿಗೂ ಅತ್ಯುತ್ತಮ ಆರೋಗ್ಯ ಸೇವೆ ನೀಡುವುದು ನಮ್ಮ ಗುರಿಯಾಗಬೇಕು, ವೈದ್ಯಕೀಯ ತಂತ್ರಜ್ಞಾನ ಕೆಲವೇ ಜನರಿಗೆ ಸೀಮಿತವಾಗದೆ ಎಲ್ಲ ವರ್ಗದ ರೋಗಿಗಳಿಗೂ ಪ್ರಯೋಜನವಾಗುವಂತೆ ಮಾಡುವುದು ಮುಖ್ಯ.
ಡಾ.ಸುಧೀರ್ ಶ್ರೀವಾಸ್ತವ, ಸಂಸ್ಥಾಪಕ, ಎಸ್.ಎಸ್.ಇನ್ನೋವೇಷನ್ಸ್ ಇಂಟರ್‌ನ್ಯಾಷನಲ್ ಇಂಕ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net