ಮನಿಷ್‌ಗೆ ಭಾವಪೂರ್ಣ ವಿದಾಯ

ವಿಶೇಷ ಪ್ರಾರ್ಥನೆ
 ಮನಿಷ್ ಕರ್ಕಡ ಅವರಿಗೆ ಅಂತಿಮ ಕ್ರಿಯೆ ಹಳೆಯಂಗಡಿ ಅಮ್ಮನ್ ಮೆಮೋರಿಯಲ್ ಚರ್ಚ್ ಧಪನ ಭೂಮಿಯಲ್ಲಿ ನಡೆಯಿತು.
ಮನಿಷ್ ಕರ್ಕಡ ಅವರಿಗೆ ಅಂತಿಮ ಕ್ರಿಯೆ ಹಳೆಯಂಗಡಿ ಅಮ್ಮನ್ ಮೆಮೋರಿಯಲ್ ಚರ್ಚ್ ಧಪನ ಭೂಮಿಯಲ್ಲಿ ನಡೆಯಿತು.
Published on: 

ಹಳೆಯಂಗಡಿ: ಎಂಆರ್‌ಪಿಎಲ್ ಕಂಪನಿಯಲ್ಲಿ ಬುಧವಾರ ನಡೆದ ಅಗ್ನಿಅವಘಡದಲ್ಲಿ ಮೃತಪಟ್ಟ ಹಳೆಯಂಗಡಿ ಚರ್ಚ್ ಬಳಿಯ ನಿವಾಸಿ ಮನಿಷ್ ಕರ್ಕಡ ಅವರಿಗೆ ಅಂತಿಮ ಕ್ರಿಯೆ ಚರ್ಚ್ ಸಭಾಪಾಲಕ ಅಮೃತ್ ರಾಜ್ ಕೋಡೆ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಹಳೆಯಂಗಡಿ ಅಮ್ಮನ್ ಮೆಮೋರಿಯಲ್ ಚರ್ಚ್ ಧಪನ ಭೂಮಿಯಲ್ಲಿ ನೆರವೇರಿತು.

ಹಳೆಯಂಗಡಿಯ ಚರ್ಚ್ ಹಿಂಭಾಗದ ಮೃತರ ಸ್ವಗೃಹದಲ್ಲಿ ಗುರುವಾರ ಮಧ್ಯಾಹ್ನ ಅನೇಕ ರಾಜಕೀಯ ನಾಯಕರು ಹಾಗೂ ಗ್ರಾಮಸ್ಥರು, ಆತನ ಸಹಪಾಠಿಗಳು ಅಂತಿಮ ಗೌರವ ಸಲ್ಲಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಮಾತನಾಡಿ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಆತಂಕಗಳನ್ನು ದೂರ ಮಾಡಿ ಮುಂದಿನ ದಿನಗಳಲ್ಲಿ ಕಂಪನಿಯು ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಹಾಗೂ ಅವಘಡದಲ್ಲಿ ಮೃತರಾದವರು, ಗಾಯಾಳುಗಳಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪರಿಸರ ಮತ್ತು ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಎಂಎಲ್‌ಸಿ ಐವನ್ ಡಿಸೋಜ, ಮಾಜಿ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಹಳೆಯಂಗಡಿ ಗ್ರಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ, ಎಂಆರ್‌ಪಿಎಲ್ ಕಂಪನಿಯ ಎಂ.ಡಿ ಶ್ಯಾಮ್ ಪ್ರಸಾದ್ ಕಾಮತ್, ಡೈರೆಕ್ಟರ್ ನಂದಕುಮಾರ್, ಸೆಕ್ಯೂರಿಟಿ ಜಿಎಂ ಮುರಳಿ, ಚೀಫ್ ರೋಷನ್ ಕ್ಯಾಸ್ಟ್ರೋಲಿನೊ, ಸತೀಶ್, ವಕೀಲ ಡೇನಿಯಲ್ ದೇವರಾಜ್, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದು ಅಂತಿಮ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net