

ಮಂಗಳೂರು: ಮೀನಿನ ವ್ಯಾಪಾರಿ, ರೌಡಿಶೀಟರ್ ಆರಿಫ್ (46) ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ
ಬಂಧಿತ ಆರೋಪಿಗಳಿಗೆ ಇತರ ಕೆಲವು ಆರೋಪಿಗಳು ಸಹಕರಿಸಿದ್ದಾರೆ. ಇರ್ಷಾದ್ ಪ್ರಮುಖ ಸಹಾಯಕನಾಗಿದ್ದು, ಕೊಲೆಗೆ ಮೊದಲು ಆರೋಪಿಗಳಿಗೆ ವಸತಿ ಸೌಕರ್ಯ ಒದಗಿಸಿದ್ದಲ್ಲದೆ, ಅವರನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಸುಹೈಲ್ಕೃ ತ್ಯಕ್ಕೆ ಬಳಸಲಾದ ಬಾಡಿಗೆ ಕಾರನ್ನು ವ್ಯವಸ್ಥೆ ಮಾಡಿ, ಅದನ್ನು ರಿಫಾತ್‌ಗೆ ಹಸ್ತಾಂತರಿಸಿ ತಕ್ಷಣವೇ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದಾನೆ . ಅರ್ಶದ್ ಮಾರಕಾಸ್ತ್ರಗಳನ್ನು ಒದಗಿಸುವಲ್ಲಿ ಮತ್ತು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದಾನೆ. ಈತ ಪೊಲೀಸರ ಚಲನವಲನಗಳನ್ನು ಗಮನಿಸಿ ಅಪ್‌ಡೇಟ್ ನೀಡುವುದು, ವಾಹನ ವ್ಯವಸ್ಥೆ ಮಾಡುವುದು ಮತ್ತು ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ಹಣಕಾಸಿನ ನೆರವು ನೀಡುವ ಕೆಲಸ ಮಾಡುತ್ತಿದ್ದ.
ಅಶ್ವಿರ್, ಪೊಲೀಸ್ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ತಾಂತ್ರಿಕ ನೆರವು ನೀಡಿದ್ದಾನೆ. ಈತ ಆರೋಪಿಗಳಿಗೆ ವಿದೇಶದಿಂದ ಒಟಿಪಿಗಳನ್ನು ಒದಗಿಸುವ ಮೂಲಕ ಸ್ಥಳೀಯವಾಗಿ ಅಂತರಾಷ್ಟ್ರೀಯ ವ್ಯಾಟ್ಸಾಪ್ ಖಾತೆಗಳನ್ನು ಬಳಸಲು ಸಹಕರಿಸಿದ್ದಾನೆ. ಒಂದು ನಂಬರ್ ಪೊಲೀಸರಿಗೆ ಪತ್ತೆಯಾದಾಗ, ತನಿಖೆಯಿಂದ ತಪ್ಪಿಸಿಕೊಳ್ಳಲು ಹೊಸ ನಂಬರ್‌ಗಳನ್ನು ನೀಡುತ್ತಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮುಸ್ತಫಾ ಮತ್ತು ಅಶ್ವಿರ್ ಆರೋಪಿಗಳು ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅವರ ಪ್ರಯಾಣ, ವಸತಿ ಮತ್ತು ಇತರ ವ್ಯವಸ್ಥೆಗಳಿಗಾಗಿ ಅಗತ್ಯ ಹಣಕಾಸಿನ ನೆರವು ನೀಡಿದ್ದಾರೆ ಎಂಬ ಪುರಾವೆಗಳು ಲಭ್ಯವಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮುಂದುವರಿದ ತನಿಖೆ: