ಶಾಸಕ ಸಹಿತ 15 ಮಂದಿ ಬಂಧನ : ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ಮುಂದುವರಿದ ಪ್ರತಿಭಟನೆ

ಶಾಸಕ ಎ.ಕೆ.ಎಂ.ಅಶ್ರಫ್ ಅವರನ್ನು ಪೊಲೀಸರು ಬಂಧಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅವರನ್ನು ಪೊಲೀಸರು ಬಂಧಿಸಿದರು.
Published on
ಬುಧವಾರ ರಾತ್ರಿ ಟೋಲ್ ಪ್ಲಾಜಾಕ್ಕೆ ಧರಣಿ ನಿರತರು ಹಾನಿ ಎಸಗಿದ್ದು, ಪ್ರತಿಭಟನೆ ಸ್ಥಗಿತಗೊಳಿಸಲಾಗಿತ್ತು. ಗುರುವಾರ ಮತ್ತೆ ಆರಂಭಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಡಿವೈಎಸ್‌ಪಿ ಸಿ.ಕೆ.ಸುನೀಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಅವರನ್ನು ಬಂಧಿಸಿ ಕಾಸರಗೋಡು ಎ.ಆರ್.ಕ್ಯಾಂಪ್‌ಗೆ, ಸಿ.ಎ.ಸುಬೈರ್, ಕುಂಬಳೆ ಗ್ರಾಪಂ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್, ಅಶ್ರಫ್ ಕಾರ್ಲೆ, ಎ.ಕೆ ಆರಿಫ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು ಕುಂಬಳೆ ಸೇರಿದಂತೆ ಇತರರನ್ನು ಕುಂಬಳೆ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಲಾಯಿತು. ಪ್ರತಿಭಟನೆಗೆ ನಿರ್ಮಿಸಿದ್ದ ಚಪ್ಪರವನ್ನು ಪೊಲೀಸರು ತೆರವುಗೊಳಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಟೋಲ್ ಶುಲ್ಕ ಸಂಗ್ರಹ ಸ್ಥಗಿತಗೊಳಿಸಲಾಗಿದೆ.

ಸಂಘರ್ಷಕ್ಕೆ ದಾರಿ

ಟೋಲ್ ಸಂಗ್ರಹ ವಿರುದ್ಧ ಹೋರಾಟ ಸಮಿತಿ ಸದಸ್ಯರು ಒಳಗೊಂಡಂತೆ ಐನೂರು ಮಂದಿಯನ್ನು ಆರೋಪಿಗಳೆಂದು ಹೆಸರಿಸಿ ಕುಂಬಳೆ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಟೋಲ್ ಸಂಗ್ರಹ ಮತ್ತೆ ಆರಂಭಿಸಿದರೆ ಹೋರಾಟ ಮುಂದುವರಿಸಲಾಗವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net