_1762878276708.webp?w=480&auto=format%2Ccompress&fit=max)
_1762878276708.webp?w=480&auto=format%2Ccompress&fit=max)
ಕಾಸರಗೋಡು: ಜೀಪಿನಲ್ಲಿ ಗಾಂಜಾ ಸಾಗಾಟ ಪ್ರಕರಣದ ಅಪರಾಧಿಗಳಾದ ಕಣ್ಣೂರು ಮಟ್ಟನ್ನೂರು ವಾಯಂತೋಡು ನಿವಾಸಿ ರನೀಸ್ ಹಾಗೂ ಮಟ್ಟನ್ನೂರ್ ಇಲ್ಲಮೂಲಂ ನಿವಾಸಿ ಮಹ್‌ರೂಫ್ ಎಂಬುವರಿಗೆ ತಲಾ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಮತ್ತು ಸೆಶನ್ಸ್ ನ್ಯಾಯಾಲಯ(ದ್ವಿತೀಯ) ನ್ಯಾಯಾಧೀಶೆ ಕೆ.ಪ್ರಿಯಾ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿಗಳು ಮೂರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. 2020 ಆ.1ರಂದು ತಡರಾತ್ರಿ ಕಾಸರಗೋಡು ನಗರಠಾಣೆ ಪೊಲೀಸರು ಕರಂದಕ್ಕಾಡಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಕಣ್ಣೂರು ಕಡೆ ತೆರಳುತ್ತಿದ್ದ ಜೀಪಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಕಿ.ಗ್ರಾಂ. ಗಾಂಜಾ ಪತ್ತೆಯಾಗಿತ್ತು.