ಶಿಕ್ಷಣ ಪ್ರೋತ್ಸಾಹದೊಂದಿಗೆ ಅಭಿವೃದ್ಧಿಗೆ ಕೊಡುಗೆ ಅಮೂಲ್ಯ : ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರು ಅಭಿಪ್ರಾಯ

 ಬೆಂಗಳೂರಿನ ವತ್ಸಲಾ ದಾಮೋದರ್ ಅವರಿಂದ ಶಾಲೆಗೆ ಒದಗಿಸಲ್ಪಟ್ಟ ಶಿಕ್ಷಣ ಮತ್ತು ಆಟದ ಸವಲತ್ತುಗಳನ್ನು ಉದ್ಘಾಟಿಸಲಾಯಿತು.
ಬೆಂಗಳೂರಿನ ವತ್ಸಲಾ ದಾಮೋದರ್ ಅವರಿಂದ ಶಾಲೆಗೆ ಒದಗಿಸಲ್ಪಟ್ಟ ಶಿಕ್ಷಣ ಮತ್ತು ಆಟದ ಸವಲತ್ತುಗಳನ್ನು ಉದ್ಘಾಟಿಸಲಾಯಿತು.
Published on

ಮೂಲ್ಕಿ: ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜತೆಗೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ದಾನಿಗಳ ಕೊಡುಗೆ ಅಮೂಲ್ಯವಾದದ್ದು. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜತೆಗೆ ಶಾಲೆ ಉನ್ನತ ಮಟ್ಟಕ್ಕೆ ಏರಬೇಕಾಗಿದೆ ಎಂದು ಮೂಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತರು ಹೇಳಿದರು.

ಪಡುಪಣಂಬೂರು ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ವತ್ಸಲಾ ದಾಮೋದರ್ ಅವರಿಂದ ಶಾಲೆಗೆ ಒದಗಿಸಲ್ಪಟ್ಟ ಅಡುಗೆ ಕೋಣೆ ಶಿಕ್ಷಕರ ಕೊಠಡಿ, 20 ಆಧುನಿಕ ಬೆಂಚ್‌ಗಳು ಹಾಗೂ ಹೊರಾಂಗಣ ಆಟದ ಸಲಕರಣೆಗಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉದ್ಯಮಿ ಜಯಕೃಷ್ಣ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಬೆಂಗಳೂರು ಕೇರ್ ಟ್ರಸ್ಟ್ ಅಧ್ಯಕ್ಷ ಮನೋಜ್ ಕುಮಾರ್, ಸಹ ಕಾರ್ಯದರ್ಶಿ ಆನಂದ್ ಹರಿಹರ, ಶಾಂತಕುಮಾರ್, ಬೆಂಗಳೂರು ಡೈನಾಟೆಕ್ ಟೂಲ್ಸ್ ಆ್ಯಂಡ್ ಡಿವೈಸಸ್ ಮುಖ್ಯಸ್ಥ ಬಿ.ದಾಮೋದರ್, ನಿರ್ದೇಶಕಿ ವತ್ಸಲಾ ದಾಮೋದರ್, ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ ಕಲ್ಲಾಪು, ಮಂಗಳೂರು ಉತ್ತರ ವಲಯ ಬಿಇಒ ಜೇಮ್ಸ್ ಕುಟಿನೊ, ಕಟ್ಟಡ ಸಮಿತಿ ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್, ಎಸ್‌ಡಿಎಂಸಿ ಅಧ್ಯಕ್ಷೆ ರೂಪಕಲಾ, ಪ್ರಭಾರ ಮುಖ್ಯಶಿಕ್ಷಕಿ ಸುಕನ್ಯಾ ದೇವಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಉಮೇಶ್ ಪೂಜಾರಿ ಉಪಸ್ಥಿತರಿದ್ದರು.

ಶಿಕ್ಷಕಿ ಜೂಲಿಯೆಟ್ ಡಿಸೋಜ ಸ್ವಾಗತಿಸಿ, ಜನಾರ್ದನ ಪಡುಪಣಂಬೂರು ನಿರೂಪಿಸಿದರು. ಬಳಿಕ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net