ಕುಂಬಳೆ ನಿವಾಸಿ ದಯಾನಂದ ಆಚಾರ್ಯ ಅವರ ಪತ್ನಿ ಅಶ್ವಿನಿ ತನ್ನ ಮೂರು ವರ್ಷದ ಪುತ್ರಿ ಮಿಷಿತಾ ಅವರೊಂದಿಗೆ ಕಾಸರಗೊಡು ಚೌಕಿ ತೆರಳಲು ಕುಂಬಳೆಯಿಂದ ಬಸ್ಸನ್ನೇರಿದ್ದರು. ಬಸ್ ಚೌಕಿ ತಲುಪುತ್ತಿದ್ದಂತೆ ಮಗುವಿನ ಕತ್ತಿನಲ್ಲಿದ್ದ ನಾಲ್ಕು ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿತ್ತು. ಈ ಬಗ್ಗೆ ಬಸ್‌ನ ನಿರ್ವಾಹಕರಲ್ಲಿ ಮಾಹಿತಿ ನೀಡಿದ್ದು, ಹುಡುಕಾಟದ ಮಧ್ಯೆ ಚೈನಿನ ಕೊಳಿಕೆ ಭಾಗ ಮಾತ್ರ ಬಸ್ಸಿನೊಳಗೆ ಲಭಿಸಿದೆ. ಅಶ್ವಿನಿ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.