ಜನರ ಶ್ರೇಯೋಭಿವೃದ್ಧಿ ಗುರಿಯಾಗಿಸಿಕೊಂಡ ಸಂಸ್ಥೆ : ಎಚ್.ವಸಂತ ಬೆರ್ನಾಡ್ ಅಭಿಪ್ರಾಯ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಹಕೋಶಾಧಿಕಾರಿಯಾಗಿ ಆಯ್ಕೆಯಾದ ಸೊಸೈಟಿ ಗ್ರಾಹಕ ಯೋಗೀಶ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಹಕೋಶಾಧಿಕಾರಿಯಾಗಿ ಆಯ್ಕೆಯಾದ ಸೊಸೈಟಿ ಗ್ರಾಹಕ ಯೋಗೀಶ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು
Published on

ಹಳೆಯಂಗಡಿ: ಗ್ರಾಮೀಣ ಜನರ ಶ್ರೇಯೋಭಿವೃದ್ಧಿಯನ್ನು ಮುಖ್ಯ ಗುರಿಯಾಗಿಸಿ ಸ್ಥಾಪಿತಗೊಂಡ ಸಂಸ್ಥೆಯು ಉತ್ತಮವಾಗಿ ಮುನ್ನಡೆಯಲು ಗ್ರಾಹಕರು ಮತ್ತು ಸಿಬ್ಬಂದಿಯ ಪ್ರಾಮಾಣಿಕ ಶ್ರಮ ಕಾರಣ. ಮುಂದಿನ ದಿನಗಳಲ್ಲಿ ಹೆಚ್ಚು ಜನಪರ ಯೋಜನೆಗಳನ್ನು ನೀಡಲು ಸಹಕಾರಿಯಾಗಲಿದೆ ಎಂದು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದರು.

ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಗ್ರಾಹಕರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಸಹಕಾರಿ ಸಂಸ್ಥೆಗಳು ಬೆಳೆಯಲು ಮಹಿಳೆಯರ ಸಹಕಾರ ಪ್ರಮುಖ. ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸಂಘವು ಗ್ರಾಹಕರ ಜತೆ ಉತ್ತಮ ಬಾಂಧವ್ಯದ ಮೂಲಕ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಹಕೋಶಾಧಿಕಾರಿಯಾಗಿ ಆಯ್ಕೆಯಾದ ಸೊಸೈಟಿ ಗ್ರಾಹಕ ಯೋಗೀಶ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.

ಮುಕ್ಕ ಮೆಸ್ಕಾಂ ಸೆಕ್ಷನ್ ಆಫೀಸರ್ ಯಶೋಧರ್ ಸಾಲ್ಯಾನ್, ಸೊಸೈಟಿ ನಿರ್ದೇಶಕರಾದ ಉಮಾನಾಥ ಜೆ.ಶೆಟ್ಟಿಗಾರ್, ಜಯಕೃಷ್ಣ ಕೋಟ್ಯಾನ್, ನವೀನ್ ಸಾಲ್ಯಾನ್, ಶಾಖಾ ಪ್ರಬಂಧಕಿ ಪ್ರಜ್ಞಾ ಶ್ರೀ ಉಪಸ್ಥಿತರಿದ್ದರು. ಸ್ವಸಹಾಯ ಗುಂಪುಗಳ ಪ್ರೇರಕಿ ನಿರಂಜಲ ಪ್ರಾರ್ಥಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು. ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net