ಕ್ರಿಕೆಟ್ ಅಕಾಡೆಮಿಯಿಂದ ಕ್ರೀಡೆಗೆ ಪ್ರೋತ್ಸಾಹ : ಎಂ.ಮಿಥುನ್ ರೈ ಟ್ರೋಫಿಯಲ್ಲಿ ಧನಂಜಯ ಮಟ್ಟು ಆಶಯ

ರಾಷ್ಟ್ರಮಟ್ಟದ ಅಹರ್ನಿಶಿ ಓವರ್‌ಆರ್ಮ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಎಂ.ಮಿಥುನ್ ರೈ ಟ್ರೋಫಿ-2025ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ರಾಷ್ಟ್ರಮಟ್ಟದ ಅಹರ್ನಿಶಿ ಓವರ್‌ಆರ್ಮ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಎಂ.ಮಿಥುನ್ ರೈ ಟ್ರೋಫಿ-2025ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
Published on

ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ಕ್ರಿಕೆಟ್‌ಗೆ ಬಹಳಷ್ಟು ಪ್ರೋತ್ಸಾಹವಿದ್ದರೂ ಯುವ ಜನತೆಗೆ ತರಬೇತಿ ಕೊರತೆ ಇದೆ. ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಮೂಲಕ ಯುವಕರನ್ನು ಕ್ರೀಡೆಗೆ ಪ್ರೋತ್ಸಾಹಿಸಬೇಕು ಎಂದು ಡಿಸಿಸಿ ಸದಸ್ಯ ಧನಂಜಯ ಮಟ್ಟು ಹೇಳಿದರು.

ಮೂಲ್ಕಿ ವಿಜಯ ಕಾಲೇಜು ಕ್ರೀಡಾಂಗಣದಲ್ಲಿ ಈಗಲ್ ಮೆರೈನ್ ಮೂಲ್ಕಿ ಆಶ್ರಯದಲ್ಲಿ 3 ದಿನ ನಡೆಯಲಿರುವ ರಾಷ್ಟ್ರಮಟ್ಟದ ಅಹರ್ನಿಶಿ ಓವರ್‌ಆರ್ಮ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಎಂ.ಮಿಥುನ್ ರೈ ಟ್ರೋಫಿ-2025ಗೆ ಚಾಲನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಮೂಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಈಗಲ್ ಮೆರೈನ್ ವ್ಯವಸ್ಥಾಪಕ ಕಾರ್ತಿಕ್ ಸಾಲ್ಯಾನ್, ಭೂ ನ್ಯಾಯ ಮಂಡಳಿ ಸದಸ್ಯ ಶಂಕರ ಪಡಂಗ, ಮೂಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಪೂಜಾರಿ, ಮಾಜಿ ಅಧ್ಯಕ್ಷ ಅಶೋಕ್ ಪೂಜಾರಿ, ಫ್ರೆಂಡ್ಸ್ ಪಡುಬಿದ್ರಿ ನಾಯಕ ಸುಭಾಷ್ ಕಾಮತ್ ಇದ್ದರು. ದಿನೇಶ್ ಕೊಲ್ನಾಡು ನಿರ್ವಹಿಸಿದರು.

ಪಂದ್ಯಾಟದಲ್ಲಿ ಬಲಿಷ್ಠ 17 ತಂಡಗಳು ಲೀಗ್ ಮಾದರಿಯಲ್ಲಿ ಸೆಣಸಾಡಲಿವೆ. ಮೊದಲ ಪಂದ್ಯದಲ್ಲಿ ಮೂಲ್ಕಿ ಸ್ಪಾನ್ ಮೆರೈನ್ ತಂಡ ಬಲಿಷ್ಠ ಯುನೈಟೆಡ್ ಸೂರಲ್ಪಾಡಿ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ. ಎರಡನೇ ಪಂದ್ಯದಲ್ಲಿ ಪ್ಯಾರಡೈಸ್ ಬೆಳುವಾಯಿ ತಂಡ ಯುನೈಟೆಡ್ ಕೊಲ್ನಾಡು ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ದಿನದ 3ನೇ ಪಂದ್ಯದಲ್ಲಿ ಧ್ರುವಿಕ್ ಇಲವೆನ್ ಕಟಪಾಡಿ ತಂಡ ಬಬ್ರುವಾಹನ ವಾರಿಯರ್ಸ್‌ ತಂಡವನ್ನು 8 ರನ್‌ಗಳಿಂದ ಸೋಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net