ಸೋಲನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸುವ ಧೈರ್ಯ : ಹರ್ಷರಾಜ ಶೆಟ್ಟಿ ಜಿ.ಎಂ. ಕರೆ

ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ 21ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರ್ಷರಾಜ ಶೆಟ್ಟಿ ಜಿ.ಎಂ. ಮಾತನಾಡಿದರು.
ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ 21ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರ್ಷರಾಜ ಶೆಟ್ಟಿ ಜಿ.ಎಂ. ಮಾತನಾಡಿದರು.
Published on

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ನಾಯಕತ್ವ ಗುಣಗಳೊಂದಿಗೆ, ಸೋಲನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸುವ ಧೈರ್ಯ ಮತ್ತು ಪ್ರಾಮಾಣಿಕ ಪ್ರಯತ್ನ ಬಹಳ ಅಗತ್ಯ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ. ಹೇಳಿದರು.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತದ ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ 21ನೇ ವಾರ್ಷಿಕೋತ್ಸವ ಪೂರ್ವಭಾವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಪಾಠ ಮತ್ತು ಕ್ರೀಡೆಗಳನ್ನು ಸಮಾನವಾಗಿ ಸ್ವೀಕರಿಸಿ ಸಾಧಕರಾದಲ್ಲಿ ಭವಿಷ್ಯ ಜೀವನ ಸುಗಮವಾಗುತ್ತದೆ ಎಂದರು.

ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಎಚ್.ರಾಮದಾಸ್ ಕಾಮತ್, ಸಂಚಾಲಕರಾದ ಎಂ.ಪಾಂಡುರಂಗ ಭಟ್, ಪ್ರಾಂಶುಪಾಲೆ ಕಾಮಾಕ್ಷಿ ನಾಯಕ್ ಉಪಸ್ಥಿತರಿದ್ದರು. ಅನ್ವಿತಾ ಸ್ವಾಗತಿಸಿದರು. ಗೀತಾ ಎಸ್. ನಿರೂಪಿಸಿದರು. ಶೈಲಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net