

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಿಯಮಿತವಾದ ಕ್ರೀಡಾ ಚಟುವಟಿಕೆಯಿಂದ ಎಲ್ಲ ವಯೋಮಾನದ ಜನರು ತಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥೃ ಕಾಪಾಡಿಕೊಳ್ಳಬಹುದು. ಆದ್ದರಿಂದ ಸಮಾಜದ ಆರೋಗ್ಯದಲ್ಲಿ ಕ್ರೀಡಾ ಚಟುವಟಿಕೆಗಳು ಪಾತ್ರ ಮುಖ್ಯವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಅಧೀಕ್ಷಕ ಮಂಜುನಾಥ ಎಲ್. ಹೇಳಿದರು.
ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ವತಿಯಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ ಜಿಲ್ಲಾ ಮಟ್ಟದ ಹಿರಿಯರ ವಿಭಾಗ (ಪುರುಷರು ಮತ್ತು ಮಹಿಳೆಯರು) ಹಾಗೂ ಕಿರಿಯರ ವಿಭಾಗ (ಬಾಲಕರು ಹಾಗೂ ಬಾಲಕಿಯರು) ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಕ್ರೀಡೆಯು ದೈಹಿಕ ಕ್ಷಮತೆಯನ್ನು ಕಾಪಾಡುವುದು ಮಾತ್ರವಲ್ಲದೆ, ರಚನಾತ್ಮಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಅಧ್ಯಕ್ಷ ರಾಜ್‌ಗೋಪಾಲ್ ಸುವರ್ಣ, ಕಾರ್ಯದರ್ಶಿ ಲಕ್ಷ್ಮಣ್ ರೈ, ಉಪಾಧ್ತಕ್ಷ ಮಹಾಬಲ ಶೆಟ್ಟಿ, ಗೌರವ ಕಾರ್ಯದರ್ಶಿ ಮೇರಿ ಹಿಲ್ಡಾ ಡಿಸೋಜ, ಸುಳ್ಯದ ಫಾದರ್ ವಿಕ್ಟರ್ ಡಿಸೋಜ, ಸಂತ ಆ್ಯನ್ಸ್ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ 200 ಮಕ್ಕಳು ಹಾಗೂ 80 ಹಿರಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.
ತರಬೇತುದಾರ ನಾರಾಯಣ ಶೇರಿಗಾರ್ ಸ್ವಾಗತಿಸಿದರು.
100, 200, 400, 899, 1500 ಹಾಗೂ 5000 ಮೀಟರ್ ಓಟ, 5000 ಮೀಟರ್ ನಡಿಗೆ, ಹೈಜಂಪ್, ಲೋಂಗ್ ಜಂಪ್, ಟ್ರಿಪಲ್ ಜಂಪ್, ಷಾಟ್‌ಪುಟ್, ಡಿಸ್ಕಸ್, ಹ್ಯಾಮರ್ ಥ್ರೋ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.