

ಮಂಗಳೂರು: ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಬುಧವಾರ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.
ಅಸೋಸಿಯೇಷನ್ ಅಧ್ಯಕ್ಷರಾಗಿ ಜಗದೀಶ್ ಶೆಟ್ಟಿ ದೇವಿ ದಯಾಳ್,ಗೌರವ ಸಲಹೆಗಾರರು ಜೆ.ಆನಂದ್ ಸೋನ್ಸ, ಉಪಾಧ್ಯಕ್ಷ ಸತೀಶ್ ರೈ ನಡುಬೈಲ್, ಉಪಾಧ್ಯಕ್ಷ ಭವಾನಿ ಜೋಗಿ, ಕಾರ್ಯದರ್ಶಿ ಪ್ರಚೇತ್ ಕೆ, ಖಜಾಂಚಿ ನಂದಕುಮಾರ್ ಅಂಚನ್ ಆಯ್ಕೆಯಾದರು.
ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದ ಬಗ್ಗೆ ಸದಸ್ಯರೊಂದಿಗೆ ಮಹಾಸಭೆಯಲ್ಲಿ ಚರ್ಚಿಸಲಾಯಿತು.