ದ.ಕ.ದಲ್ಲಿ ಇನ್ನಷ್ಟು ಸಡಿಲಿಕೆ

mangalore
Published on

ಮಂಗಳೂರು: ಕಿತ್ತಳೆ ವಯಲವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆ ಮಾಡಲಾಗಿದೆ. ಮೇ 4ರಿಂದ ಯಾವೆಲ್ಲ ಚಟುವಟಿಕೆಗಳನ್ನು ನಡೆಸಬಹುದು, ಯಾವುದೆಲ್ಲ ನಿರ್ಬಂಧಿತ ಎನ್ನುವ ಕುರಿತು ದಕ್ಷಿಣ ಕನ್ನಡ ಜಿಲ್ಲಾಡಳಿತ ಭಾನುವಾರ ವಿಸ್ತೃತ ಸುತ್ತೋಲೆ ಹೊರಡಿಸಿದೆ.

ಯಾವುದೆಲ್ಲ ಇಲ್ಲ?: ರೈಲು, ವಿಮಾನ, ಅಂತಾರಾಜ್ಯ ರಸ್ತೆ ಸಾರಿಗೆ, ಶಾಲೆ ಕಾಲೇಜು, ಇತರ ಶಿಕ್ಷಣ, ಕೋಚಿಂಗ್ ಸಂಸ್ಥೆಗಳು ಇಲ್ಲ.

ಹೋಟೆಲ್, ರೆಸ್ಟೋರೆಂಟ್ಸ್, ಸಿನಿಮಾ ಹಾಲ್, ಮಾಲ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾರ್, ಕ್ಲಬ್, ಸ್ವಿಮಿಂಗ್ ಪೂಲ್, ಎಂಟರ್‌ಟೈನ್‌ಮೆಂಟ್ ಪಾರ್ಕ್, ಅಸೆಂಬ್ಲಿ ಹಾಲ್, ಬಾರ್ಬರ್ ಶಾಪ್, ಸ್ಪಾ, ಸಲೂನ್ಸ್, ಟೆಕ್ಸ್‌ಟೈಲ್ಸ್, ಬಟ್ಟೆ ಅಂಗಡಿಗಳು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಮನೋರಂಜನಾ, ಧಾರ್ಮಿಕ, ಇತರ ಮಾದರಿ ಸಮಾವೇಶಗಳು, ಧಾರ್ಮಿಕ ಸ್ಥಳಗಳು ಇಲ್ಲ. ನಗರ ಹಾಗೂ ಗ್ರಾಮೀಣ ಭಾಗದ ಮಾಲ್, ಮಾರ್ಕೆಟ್ಸ್ ಹಾಗೂ ಮಾರ್ಕೆಟ್ ಕಾಂಪ್ಲೆಕ್ಸ್‌ಗಳಲ್ಲಿ ಅಗತ್ಯವಲ್ಲದ ವಸ್ತುಗಳ ಅಂಗಡಿ ತೆರೆಯುವಂತಿಲ್ಲ. ಯಾವುದೇ ಅಗತ್ಯವಲ್ಲದ ಚಟುವಟಿಕೆಗಳಿಗೆ ಸಾರ್ವಜನಿಕ ಸಂಚಾರ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ. (ವಾಯು, ರೈಲು, ರಸ್ತೆ ಸಾರಿಗೆ ವಿಶೇಷ ಸಂದರ್ಭಗಳಲ್ಲಿ(ಕೇಂದ್ರ ಗೃಹ ಇಲಾಖೆ ಸೂಚಿಸಿದ ವೈದ್ಯಕೀಯ ಅಥವಾ ಇತರ ಚಟುವಟಿಕೆಗಳಿಗೆ ಅನುಮೋದಿಸಲಾಗಿದೆ)

ಇವುಗಳಿಗಿದೆ ಅನುಮತಿ: ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ, ಕ್ಲಿನಿಕ್(ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎನ್ನುವ ಷರತ್ತಿನೊಂದಿಗೆ) ಕಾರ್ಯನಿರ್ವಹಿಸಬಹುದು, ಆಟೊ ರಿಕ್ಷಾ(ಚಾಲಕ ಹಾಗೂ ಗರಿಷ್ಠ 2 ಪ್ರಯಾಣಿಕರು), ಟ್ಯಾಕ್ಸಿ ಹಾಗೂ ಕ್ಯಾಬ್ ಅಗ್ರಗೇಟರ್ಸ್‌(ಗರಿಷ್ಠ 1 ಚಾಲಕ ಹಾಗೂ 2 ಪ್ರಯಾಣಿಕರು). ಅನುಮತಿ ನೀಡಲಾದ ಚಟುವಟಿಕೆಗಳಿಗೆ ಜನರು ಚತುಷ್ಚಕ್ರ ವಾಹನಗಳಲ್ಲಿ ಚಾಲಕ ಹಾಗೂ ಇಬ್ಬರು ದ್ವಿಚಕ್ರ ವಾಹನದಲ್ಲಿ ಸಹಸವಾರರಿಲ್ಲದೆ ಸಂಚರಿಸಬಹುದು. ನಗರ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ, ಕೈಗಾರಿಕಾ ಸಂಸ್ಥೆಗಳು, ರಫ್ತು ಆಧರಿತ ಘಟಕ, ಕೈಗಾರಿಕಾ ವಸಾಹತು, ಕೈಗಾರಿಕಾ ಟೌನ್‌ಶಿಪ್‌ಗಳನ್ನು ನಿಯಂತ್ರಿತ ಪ್ರವೇಶದೊಂದಿಗೆ ಬಿಡಲಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲಾ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ಇದೆ.

ಔಷಧ, ಫಾರ್ಮಾ, ವೈದ್ಯಕೀಯ ಉಪಕರಣ, ಅವುಗಳ ಕಚ್ಚಾ ವಸ್ತು, ಬಿಡಿಭಾಗಗಳ ಉತ್ಪಾದನೆ, ಐಟಿ ಹಾರ್ಡ್‌ವೇರ್, ಸಪ್ಲೈಚೈನ್, ಸೆಣಬು ಕೈಗಾರಿಕೆ ಇತ್ಯಾದಿಗಳು ಸಾಮಾಜಿಕ ಅಂತರದೊಂದಿಗೆ ಕಾರ್ಯನಿರ್ವಹಿಸಬಹುದು. ನಗರ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು(ಹೊರಗಿನಿಂದ ಕಾರ್ಮಿಕರನ್ನು ಸಾಗಾಟ ಮಾಡದೆ) ನಿರ್ವಹಿಸಬಹುದು. ಗ್ರಮೀಣ ಭಾಗದಲ್ಲಿ ನರೇಗಾ, ಆಹಾರ ಸಂಸ್ಕರಣೆ, ಇಟ್ಟಿಗೆ ಸೇರಿದಂತೆ ಎಲ್ಲಾ ನಿರ್ಮಾಣ ಕಾಮಗಾರಿಗೆ ಅವಕಾಶ. ಎಲ್ಲ ಒಂದೇ ಇರುವ ಅಂಗಡಿಗಳು(ಸಿಂಗಲ್ ಶಾಪ್ಸ್), ಕಾಲನಿ, ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಗಳು ಕಾರ್ಯನಿರ್ವಹಿಸಬಹುದು. ಇ ಕಾಮರ್ಸ್ ಚಟುವಟಿಕೆಗಳನ್ನು ಅಗತ್ಯ ವಸ್ತುಗಳಿಗಷ್ಟೇ ಬಿಡಲಾಗಿದೆ. ಖಾಸಗಿ ಕಚೇರಿಗಳು ಶೇ.33 ಮಂದಿ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಸುತ್ತೋಲೆ ತಿಳಿಸಿದೆ.

ರಾತ್ರಿ 7ರಿಂದ ಬೆಳಗ್ಗೆ 7 ನಿರ್ಬಂಧ

ಮೇ 4ರಿಂದ ಅವಕಾಶ ನೀಡಲಾಗಿರುವ ಎಲ್ಲಾ ಚಟುವಟಿಕೆಗಳಿಗೂ ಬೆಳಗ್ಗೆ 7ರಿಂದ ರಾತ್ರಿ 7ರ ವರೆಗೆ ಮಾತ್ರ ಅವಕಾಶ. ಬಳಿಕ ಬೆಳಗ್ಗೆ 7ರ ವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. ಅಲ್ಲದೆ ಉದ್ಯೋಗಕ್ಕಾಗಿ ದ.ಕ-ಉಡುಪಿ ಜಿಲ್ಲೆ ಮಧ್ಯೆಯೂ ಓಡಾಡುವುದಕ್ಕೆ ಅವಕಾಶವಿಲ್ಲ. ಬೇರೆ ಜಿಲ್ಲೆಯಲ್ಲಿ ಉದ್ಯೋಗದಲ್ಲಿರುವವರು ಒನ್‌ಟೈಂ ಪಾಸ್ ಪಡೆದು ಉದ್ಯೋಗವಿರುವಲ್ಲೇ ಇರುವುದು ಉತ್ತಮ.

ಕಂಟೈನ್ಮೆಂಟ್ ವಲಯ ಯಥಾಸ್ಥಿತಿ

ಮೇಲೆ ಹೇಳಿರುವ ಅವಕಾಶಗಳು ಯಾವುದೂ ಕಂಟೇನ್ಮೆಂಟ್ ವಲಯಕ್ಕೆ ಅನ್ವಯವಾಗುವುದಿಲ್ಲ. ಅಲ್ಲಿ ಯಾವುದೇ ಅಂಗಡಿ, ವಾಹನ ಓಡಾಟಕ್ಕೆ ಅವಕಾಶವಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net