ದಕ್ಷಿಣ ಕನ್ನಡ ಗೃಹರಕ್ಷಕದಳ ಘಟಕಾಧಿಕಾರಿಗಳ ಸಭೆ

mng--4 april Home guard meeting - Copy
Published on

ಮಂಗಳೂರು: ಮೇರಿಹಿಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಗುರುವಾರ ಘಟಕಾಧಿಕಾರಿಗಳ ಸಭೆ ನಡೆಸಲಾಯಿತು.
ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು.


ಮುಂಬರುವ ಲೋಕ ಸಭಾ ಚುನಾವಣೆಗೆ ಗೃಹರಕ್ಷಕರ ನಿಯೋಜನೆ ಮತ್ತು ಅಂಚೆ ಮತ ಪತ್ರಗಳ ಪಡೆದುಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಶಿಸ್ತು ಮತ್ತು ಸಂಯಮದಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಮತ್ತು ಗೃಹರಕ್ಷಕರಿಗೆ ಸೂಚಿಸಲಾಯಿತು.


ಮಂಗಳೂರು, ಉಳ್ಳಾಲ, ಪಣಂಬೂರು, ಮೂಲ್ಕಿ, ಮೂಡಬಿದ್ರಿ, ಬಂಟ್ವಾಳ, ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ಸುಬ್ರಹ್ಮಣ್ಯ ಘಟಕಗಳ ಘಟಕಾಧಿಕಾರಿಗಳು ಮತ್ತು ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net